ದೇವದಾಸಿಯರಿಗೆ ಕಾನೂನು ಅರಿವು ಕಾರ್ಯಕ್ರಮ
ಹೂವಿನಹಡಗಲಿ 19: ರಾಜ್ಯ ಮಹಿಳಾ ಅಭಿವ್ರದ್ದಿ ನಿಗಮವು ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆ ಮತ್ತು ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯಡಿಯಲ್ಲಿ ಪಟ್ಟಣದ ಅಂಬೇಡ್ಕರ ಸಮುದಾಯ ಭವನದಲ್ಲಿ ದೇವದಾಸಿಯರಿಗೆ ಕಾನೂನು ಅರಿವು ಕಾರ್ಯಕ್ರಮ ಶುಕ್ರವಾರ ನೆಯಿತು.ವಕೀಲರಾದ ಹೆಚ್.ಸುಜಾತ ಮಾತನಾಡಿ ಮೂಡನಂಬಿಕೆ ಮತ್ತು ಅನಕ್ಷರತೆಯ ಪರಿಣಾಮವಾಗಿ ಇಂದಿಗೂ ಮುತ್ತುಕಟ್ಟುವ ಮತ್ತು ದೇವದಾಸಿ ಪದ್ಧತಿಗೆ ಕಟ್ಟು ಬೀಳುತ್ತಿರುವುದು ದುರಂತದ ಸಂಗತಿ. ಮಹಿಳೆಯರ ಕಾರಣವಾಗುತ್ತಿರುವ ಪಿಡುಗು ಹೋಗಲಾಡಿಸಲು ಸರಕಾರದ ಜತೆ ಸಂಘ ಸಂಸ್ಥೆಗಳು ಕ್ಯೆಜೋಡಿಸಬೇಕು ಜತೆಗೆ ಶೆಕ್ಷಣಿಕ ಪ್ರಗತಿಗೆ ಸರಕಾರದ ನಾನಾ ಸೌಲಭ್ಯಗಳಿದ್ದರೂ ಮಕ್ಕಳು ಶಾಲೆಗಳಿಂದ ದೂರ ಉಳಿಯುತ್ತಿರುವುದಕ್ಕೆ ಕಾರಣ ಕಂಡುಕೊಳ್ಳಬೇಕಿದೆ ಎಂದರು.ದೇವದಾಸಿ ವಿಮೋಚನಾ ತಾಲ್ಲೂಕು ಅದ್ಯಕ್ಷೆ ಬಿ.ಕಮಲಮ್ಮ ಕಾರ್ಯ ಕ್ರಮ ಉದ್ಟಾಟಿಸಿ ಮಾತನಾಡಿದರು. ದೇವದಾಸಿ ತಾಲ್ಲೂಕು ಅನುಷ್ಠಾನ ಅಧಿಕಾರಿ ಎ.ಜಿ.ಹಾಲನಗೌಡ ಇದ್ದರು.