ಸರ್ಕಾರದ ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ
ಶೇಡಬಾಳ 28: ಕೋವಿಡ್-19 ಸಾಂಕ್ರಾಮಿಕ ರೋಗವು ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ದಿ: 27ರ ರಾತ್ರಿ 9 ಗಂಟೆಯಿಂದ ದಿ. 12-5-2021 ರವರೆಗೆ ರಾಜ್ಯದಲ್ಲಿ ಜನತಾ ಕರ್ಫ್ಯೂ "ಕಠಿಣ ಕ್ರಮದ ಮಾರ್ಗಸೂಚಿ" ನೀಡಿದ್ದು, ಸದರ ಅವಧಿಯಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದನ್ನು ನಿಬಂರ್ಧಿಸಲಾಗಿದೆ. ಯಾರಾದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತವರ ಮೇಲೆ ಎಫ್.ಆಯ್.ಆರ್. ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಕಾಗವಾಡ ತಹಶೀಲ್ದಾರ ಪರಿಮಳಾ ದೇಶಪಾಂಡೆ ಹೇಳಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಜನತಾ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ದಿನಸಿ ಸಾಮಗ್ರಿ ಖರೀದಿಸಲು ಅವಕಾಶ ಇರುತ್ತದೆ. ಹಾಗೂ ತುರ್ತು ವೈದ್ಯಕೀಯ ಸಂಧರ್ಭಗಳಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ ಕೈಮಗ್ಗ, ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲರು ಈ ಹಿಂದೆಯೇ ಲಾಕ್ಡೌನ್ ಕುರಿತು ತಿಳುವಳಿಕೆ ನೀಡಿರುತ್ತಾರೆ. ಕಾಗವಾಡ ತಾಲೂಕಿನ ಸಾರ್ವಜನಿಕರು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಗೊಳ್ಳುವುದು. ಸೆನಿಟೈಜರ ಇತ್ಯಾದಿ ನಿಯಮಗಳ ಪಾಲನೆ ಮಾಡಿ ಸಹಕರಿಸಲು ಕಾಗವಾಡ ತಹಶೀಲ್ದಾರ ಪರಿಮಳಾ ದೇಶಪಾಂಡೆ ವಿನಂತಿಸಿಕೊಂಡಿದ್ದಾರೆ.