ಇಂಡಿ

ಬಂಥನಾಳದ ಜ್ಯೋತಿ ಸಂಗನಬಸವ ಶಿವಯೋಗಿಗಳು ಕುರಿತು ಉಪನ್ಯಾಸ ಕಾರ್ಯಕ್ರಮ

ಬಂಥನಾಳದ ಜ್ಯೋತಿ ಸಂಗನಬಸವ ಶಿವಯೋಗಿಗಳು ಕುರಿತು  ಉಪನ್ಯಾಸ ಕಾರ್ಯಕ್ರಮ

ಇಂಡಿ25: ವಿದ್ಯಾರ್ಥಿಗಳೇ ದೇವರು, ವಿದ್ಯಾಲಯಗಳೇ ದೇವಾಲಯಗಳು ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು, ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾಳಜಿಯೊಂದಿಗೆ ಪರಿಶ್ರಮ ಪಟ್ಟವರು ಎಂದು ನಿವೃತ್ತ ಪ್ರಾಚಾರ್ಯ ಡಾ. ವಿ.ಡಿ. ಐಹೋಳಿ ಹೇಳಿದರು.  


ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ ಬಂಥನಾಳದ ಜ್ಯೋತಿ ಸಂಗನಬಸವ ಶಿವಯೋಗಿಗಳು ಕುರಿತು ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಯನ್ನು ಮೈಗೂಡಿಸಿಕೊಂಡು ಬೆಳೆದ ಶ್ರೀಗಳು ಶೈಕ್ಷಣಿಕ ಕ್ರಾಂತಿಗೈಯುತ್ತಾ ಭಾವೈಕ್ಯತೆಯ ಹರಿಕಾರರಾಗಿದ್ದರು.ಹಾಗೆಯೇ ಅವರ ಜೋಳಿಗೆ ಜ್ಯೋತಿ ಹೊಂದಿತ್ತು. ಇಂದು ಜಗಜ್ಯೋತಿ ಆಗಿದೆ ಎಂದು ಅಭಿಪ್ರಾಯಪಟ್ಟರು. 

ರಾಘವೇಂದ್ರ ಕುಲಕರ್ಣಿ, ಸಿ.ಎಂ.ಬಂಡಗರ, ಗೀತಯೋಗಿ, ವೈ.ಜಿ.ಬಿರಾದಾರ ಮಾತನಾಡಿದರು. 

ಬಂಥನಾಳದ ವೃಷಭಲಿಂಗೇಶ್ವರ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.  

ಸಂಶೋಧಕರಾದ ಡಿ.ಎನ್‌.ಅಕ್ಕಿ, ಡಾ. ಎಸ್‌.ಕೆ.ಕೊಪ್ಪ, ಸಂತೋಷ ಬಂಡೆ, ಬಸವರಾಜ ಕಿರಣಗಿ, ವಿ.ಆರ್‌.ದಸ್ತರೆಡ್ಡಿ, ಪುಂಡಲೀಕ ಸಣ್ಣಾರ, ಶ್ರೀಧರ ಹಿಪ್ಪರಗಿ, ಈರಣ್ಣ ಕಂಬಾರ, ದತ್ತಾತ್ರೇಯ ಕುಲಕರ್ಣಿ, ಡಾ. ಮಾಧವ ಗುಡಿ, ನಿಂಗಮ್ಮಗೇರಡೆ, ರವಿಕುಮಾರ ಅರಳಿ, ಸರೋಜಿನಿ ಮಾವಿನಮರ, ಲಕ್ಷ್ಮಣ ಝಳಕಿ, ರಾಚು ಕೊಪ್ಪ, ಡಾ.ರಾಜಶ್ರೀ ಮಾರನೂರ, ಸಿದ್ರಾಮಪ್ಪ ಮಾರನೂರ ಮತ್ತಿತರಿದ್ದರು.  


ಸುದ್ದಿ ಓದಿ