ಸಾಮಾಜಿಕ ಇತಿಹಾಸದ ಒಳನೋಟಗಳು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ
ಧಾರವಾಡ 09: ಕರ್ನಾಟಕ ವಿದ್ಯಾವರ್ಧಕ ಸಂಘವು, ಎಮೆರಿಟಸ್ ಪ್ರೊಫೆಸರ್ ಸಿ.ಆರ್. ಯರವಿನತೆಲಿ ಮಠದತ್ತಿ ಅಂಗವಾಗಿ ದಿನಾಂಕ 10-10-2024 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಶೂನ್ಯ ಸಂಪಾದನೆಯ ಅನುವಾದ : ಸಾಮಾಜಿಕ ಇತಿಹಾಸದ ಒಳನೋಟಗಳು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರಿ್ಡಸಿದೆ. ತುಮಕೂರು ವಿಶ್ವವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕಡಾ.ಎನ್. ಎಸ್. ಗುಂಡೂರ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು.
ಹಿರಿಯ ವೈದ್ಯಡಾ.ಎಸ್.ಆರ್.ರಾಮನಗೌಡರ ಅಧ್ಯಕ್ಷತೆ ವಹಿಸುವರು. ಧಾರವಾಡ ಎಮೆರಿಟಸ್ ಪ್ರೊಫೆಸರ್ ಡಾ.ಸಿ. ಆರ್.ಯರವಿನತೆಲಿಮಠ ಹಾಗೂ ಬೆಳಗಾವಿಯ ವಿದ್ವಾಂಸರಾದ ಡಾ.ಗುರುದೇವಿ ಹುಲೆಪ್ಪನವರ ಮಠಗೌರವ ಉಪಸ್ಥಿತರಿರುವರು. ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.