ಧಾರವಾಡ - ಹುಬ್ಬಳ್ಳಿ

ಸರ್‌. ಸಿದ್ದಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ

ಸರ್‌. ಸಿದ್ದಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ

ಧಾರವಾಡ, 10 :  ಕರ್ನಾಟಕ ವಿದ್ಯಾವರ್ಧಕ ಸಂಘವು, ಸರ್ ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ,  ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಸರ್‌. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ಅಂಗವಾಗಿ ಸೆ. 11 2024 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಧಾರವಾಡದ ಸರ್‌. ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಸಭಾಭವನದಲ್ಲಿ ‘ಸರ್‌. ಸಿದ್ದಪ್ಪ ಕಂಬಳಿ ಅವರ ಸಾಮಾಜಿಕ ನ್ಯಾಯ’ ವಿಷಯ ಕುರಿತು ಉಪನ್ಯಾಸ ಏರಿ​‍್ಡಸಿದೆ. 

ಧಾರವಾಡ ಕ.ವಿ.ವಿ. ಕುಲಪತಿ ಡಾ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು. ಧಾರವಾಡ ಹಿರೇಮಲ್ಲೂರ ಈಶ್ವರನ್ ಪ.ಪೂ. ಮಹಾವಿದ್ಯಾಲಯ ಅಧ್ಯಾಪಕ ಡಾ. ಈರಣ್ಣ ಇಂಜಗನೇರಿ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು.  

ಧಾರವಾಡ ಸರ್ ಸಿದ್ಧಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯೆ ಡಾ. ಎಸ್‌.ಆರ್‌. ಮಂಜುಳಾ ಹಾಗೂ ಧಾರವಾಡ ಸರ್‌. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷ ಪ್ರಿ. ಶಶಿಧರ ತೋಡಕರ ಉಪಸ್ಥಿತರಿರುವರು.  

ಬೆಳಿಗ್ಗೆ 10-30 ಕ್ಕೆ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಸರ್‌. ಸಿದ್ಧಪ್ಪ ಕಂಬಳಿ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರೆ​‍್ಣ ಜರುಗುವುದು.  

ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಸುದ್ದಿ ಓದಿ