ಸ್ವಾತಂತ್ರ್ಯ ಚಳುವಳಿಯಲ್ಲಿ ಡೆಪ್ಯೂಟಿ ಚನ್ನಬಸಪ್ಪರವರ ಪಾತ್ರ ವಿಷಯ ಕುರಿತು ಉಪನ್ಯಾಸ
ಧಾರವಾಡ 08: ದಿ.06.ರಂದು ಜೆ.ಎಸ್.ಎಸ್.ನ ಮಂಜುನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾಗಿರಿಯಲ್ಲಿ ಆಯೋಜಿಸಲಾಗಿದ್ದ “ಸ್ವಾತಂತ್ರ್ಯ ಚಳುವಳಿಯಲ್ಲಿ ಡೆಪ್ಯೂಟಿ ಚನ್ನಬಸಪ್ಪ ಅವರ ಪಾತ್ರ” ವಿಷಯ ಕುರಿತು ಉಪನ್ಯಾಸ ಮಂಡನೆಯನ್ನು ಡಿ.ಎಲ್.ನಾಗರಾಜ ಸರ್ ಮತ್ತು ಪ್ರಭು ಕೆ. ಅವರ ತಂಡ ಜಾನಪದ ಹಾಗೂ ಗೀಗಿಪದ ಹಾಡಿದರು. ಧಾರವಾಡ ಭಾಗದ ಸ್ವಾತಂತ್ರ್ಯ ಹೋರಾಟಗಾರರಾದ ಡೆಪ್ಯೂಟಿ ಚನ್ನಬಸಪ್ಪನವರ ಹೋರಾಟದ ಜೀವನ ಸಾದರಪಡಿಸಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನವಲೂರಿನ ಪದವಿಪೂರ್ವ ಕಾಲೇಜಿನ ಡಿ.ಎಲ್.ನಾಗರಾಜ ಸರ್ ಅವರು ಮಾತನಾಡಿ ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಭಾಷೆಯ ಪುನರುಜ್ಜೀವನದ ಪಿತಾಮಹ ಎಂದು ಹೇಳಿದರು ಅದೇ ರೀತಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೆ.ಎಸ್.ಎಸ್. ಸಂಸ್ಥೆಯ ಇತಿಹಾಸ ಪ್ರಾದ್ಯಾಪಕರಾದ ಡಾ.ಆರ್.ವಿ. ಚಿಟಗುಪ್ಪಿ ಅವರು ಸ್ಥಳೀಯ ಇತಿಹಾಸದ ಮಹತ್ವವನ್ನು ತಿಳಿಸುತ್ತಾ ಕರ್ನಾಟಕ ಏಕೀಕರಣದಲ್ಲಿ ಡೆಪ್ಯೂಟಿ ಚನ್ನಬಸಪ್ಪನವರ ಕೊಡುಗೆಯನ್ನು ಸ್ಮರಿಸಲು ನವೆಂಬರ 1 ರಂದು ಕರ್ನಾಟಕ ರಾಜ್ಯೋತ್ಸವದೊಂದಿಗೆ ಡೆಪ್ಯೂಟಿ ಚನ್ನಬಸಪ್ಪನವರ ಜನ್ಮ ದಿನವನ್ನು ಆಚರಿಸುವಂತೆ, ಕರೆ ನೀಡಿದರು. ಪ್ರಾಚಾರ್ಯರಾದ ಶ್ರೀ ರವಿವರ್ಮ ಜೋಶಿಯವರು ಸ್ವಾಗತಿಸಿದರು. ವೈಶಾಲಿ ಕುಂದಗೊಳ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಣಮ್ಯ ಎಮ್, ಕ್ಷಿತಿಜಾ ಪಿ ಹಾಗೂ ಬೋಧಕೇತರ ಸಿಬ್ಬಂದಿಗಳೊಂದಿಗೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.