ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಿರೇಮಠರಿಗೆ ಹುಟ್ಟು ಹಬ್ಬದ ಶುಭ ಕೋರಿದ ಮುಖಂಡರು
ಶಿಗ್ಗಾವಿ 23: ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ ಎಂ ಹಿರೇಮಠ ಅವರ ಜನ್ಮದಿನದ ಶುಭ ಕೋರಿದ ಶಿಗ್ಗಾವಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಶಿಗ್ಗಾವಿ ತಾಲೂಕ ಕಾಂಗ್ರೆಸ್ ವಕ್ತಾರ ಮಂಜುನಾಥ್ ಮಣ್ಣಣ್ಣವರ, ಬಂಕಾಪುರ ಶಹರ ಘಟಕದ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ತಾಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬರ್ ಬಾವಾಜಿ, ಯುವ ಮುಖಂಡ ಜನ್ಮ ಕುಮಾರ ದೇಸಾಯಿ, ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬಿ ಸಿ ಪಾಟೀಲ್ ಅವರು ಗಣೇಶ ಪ್ರತಿಮೆ ನೀಡಿ ದೇವರು ಹೆಚ್ಚಿನ ಆಯುಷ್ಯ ಹಾಗೂ ಉತ್ತಮ ಆರೋಗ್ಯ ಕರುಣಿಸಲಿ ಎಂದು ಶುಭ ಕೋರಿದರು.