ಅನಧಿಕೃತ ಇಟ್ಟಗಿ ಬಟ್ಟಿಗಳ ತೆರವುಗೊಳಿಸುವಂತೆ ಮುಖಂಡ ಮಲ್ಲಿಕಾರ್ಜುನ್ ಆಗ್ರಹ
ರಾಣೇಬೆನ್ನೂರು30: ತಾಲೂಕಿನಲ್ಲಿ ಅನಧಿಕೃತವಾಗಿ ಇಟ್ಟಗಿ ಬಟ್ಟಿಗಳನ್ನು ಮಾಡುತ್ತಿದ್ದು ಅವುಗಳಿಂದ ರೈತರಿಗೆ ಅನಾನುಕೂಲತೆ ಆಗುತ್ತಿದೆ ಕೂಡಲೇ ತಾಲೂಕು ದಂಡಾಧಿಕಾರಿಗಳು ಮಧ್ಯಪ್ರವೇಶಿಸಿ ಅವುಗಳಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡಲಾಗುವುದು ರೈತ ಮುಖಂಡ ಮಲ್ಲಿಕಾರ್ಜುನ್ ತೆಗ್ಗಿನ ಆಗ್ರಹಿಸಿದರು.
ನಗರದ ತಹಸಿಲ್ದಾರ್ ಕಚೇರಿ ಮುಂಭಾಗ ರೈತ ಸಮೂಹದೊಂದಿಗೆ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದರು.
ತಾಲೂಕಿನ ಮಾಕನೂರು, ಚಳಗೇರಿ, ಕರೂರು ಗ್ರಾಮಗಳಲ್ಲಿ ಅನಧಿಕೃತವಾಗಿ ಇಟ್ಟಿಗೆ ಬಟ್ಟಿ ಮಾಡುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು. ಹಲವು ಬಾರಿ ಇಟ್ಟಿಗೆ ಬಟ್ಟಿ ಮಾಲೀಕರಿಗೆ ಮನವಿ ಮಾಡಿದರು ಕ್ಯಾರೆನದ ಮಾಲೀಕರು ಅವರಿಗೆ ಸೂಕ್ತ ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ಅಕ್ಕಪಕ್ಕ ಜಮೀನುಗಳಿಗೆ ಹಾಳಾಗುತ್ತಿದ್ದ ಬೆಳೆಗಳ ನಷ್ಟವನ್ನು ಕಡಿಮೆ ಮಾಡಬೇಕು ಹೇಳಿದರು.
ರೈತ ಮುಖಂಡ ನಾಗಪ್ಪ ಕಚ್ಚರಬಿ ಮಾತನಾಡಿ ತಾಲೂಕಿನ ಕರೂರು ಗ್ರಾಮದ ಸರ್ವೇ ನಂಬರ್ 140/1ಎಕ್ಸ್1 ಜಮೀನಿನ ಮಾಲೀಕರಾದ ಅಣ್ಣಪ್ಪ ಗುತ್ತೂರ ಅವರು ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಇಟ್ಟಿಗೆ ಬಟ್ಟೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಇದರಿಂದ ಪಕ್ಕದ ಜಮೀನಿನ ರೈತರ ಬೆಳೆಗಳಿಗೆ ನಿರಂತರ ಹಾನಿಯಾಗುತ್ತಿದ್ದು, ಬೆಳೆಗಳ ಮೇಲೆ ಮಣ್ಣು, ಗೊಳಲಿ, ಕಿಟ್ಟ ಬೀಳುತ್ತಿದ್ದೆ. ರೈತರು ಬೆಳೆದಂತಹ ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಅಡಕೆ, ಕಬ್ಬು, ಭತ್ತ ಮತ್ತು ತರಕಾರಿ ಬೆಳೆಗಳ ಮೇಲೆ ಧೂಳು ಬಿದ್ದು ನಾಶವಾಗುತ್ತಿದೆ. ಇದರಿಂದ ರೈತರು ಸಂಕಷ್ಟವನ್ನು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ. ಕೂಡಲೇ ತಾಲೂಕು ದಂಡಾಧಿಕಾರಿಗಳು ಮಧ್ಯಪ್ರವೇಶಿಸಿ ಇಂಥವರಿಗೆ ಕಡಿವಾಣ ಹಾಕಿ ಅನಧಿಕೃತವಾಗಿ ಇಟ್ಟಿಗೆ ಬಟ್ಟಿ ಮಾಡುತ್ತಿರುವ ಮಾಲೀಕನ ವಿರುದ್ಧ ತಕ್ಷಣ ಕ್ರಮವನ್ನು ಜರುಗಿಸಿ ಇಟ್ಟಿಗೆ ತಯಾರಿ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಬೀರಪ್ಪ ಕಚ್ಚರಬಿ, ಸಿದ್ದಪ್ಪ ಕಚ್ಚರಬಿ, ವಿಜಯ್ ಕುಮಾರ್ ಬಣಕಾರ್, ರುದ್ರನಗೌಡ ಎಸ್ ಕೆ, ಈರನಗೌಡ ಈಳಿವಿ, ಸಣ್ಣಗೌಡ ಮುದಿಗೌಡರ, ಬಸನಗೌಡ ಮುದಿಗೌಡ್ರು, ಸೋಮರೆಡ್ಡಿ ಹಾದಿಮನಿ, ಪ್ರವೀಣ್ ಎನ್ ಕೆ, ಕರಿಯಪ್ಪ ಸಾಥರ್ಿ, ಸುರೇಶ್, ನಿಂಗಪ್ಪ ಖಕ್ಕಜ್ಜಿ, ಪ್ರಶಾಂತ ಸಾಥರ್ಿ ಹಾಗೂ ಹಿರಿಯ ರೈತ ಮುಖಂಡರು ಭಾಗವಹಿಸಿದ್ದರು