ಗುಳೇಗುಡ್ಡ

ಹಿತ ಕಾಪಾಡುವಲ್ಲಿ ಬ್ಯಾಂಕು ವಿಫಲ : ಆರೋಪ

ಹಿತ ಕಾಪಾಡುವಲ್ಲಿ ಬ್ಯಾಂಕು ವಿಫಲ : ಆರೋಪ
ಗುಳೇದಗುಡ್ಡದಲ್ಲಿ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶೇರುದಾರರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಗುಳೇದಗುಡ್ಡ.15: ಶೇರುದಾರರ ಹಾಗೂ ಗ್ರಾಹಕರ ಹಿತ ಕಾಪಾಡುವಲ್ಲಿ ಬ್ಯಾಂಕು ಸಂಪೂರ್ಣ ವಿಫಲವಾಗಿದೆ. ಅಡಳಿತ ಮಂಡಳಿ ಶತಮಾನೋತ್ಸವ ಸಮಾರಂಭದಲ್ಲಿನ ಭರವಸೆ ಹುಸಿಗೊಳಿಸಿದ್ದಾರೆಂದು  ಸ್ಥಳೀಯ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶೇರುದಾರ ಸಂತೋಷ ನಾಯನೇಗಲಿ, ರಾಜು ಚಿತ್ತರಗಿ ಹಾಗೂ ಇತರರು ಆರೋಪಿಸಿದ್ದಾರೆ. 

ಮಂಗಳವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ, ನಗರದ ಪ್ರತಿಷ್ಠಿತ ಲಕ್ಷ್ಮೀ ಸಹಕಾರಿ ಬ್ಯಾಂಕು ಶತಮಾನೋತ್ಸವ ಆಚರಿಸಿದ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯದಾದ ಸಹಕಾರಿ ಬ್ಯಾಂಕು. ಆದರೆ ಬ್ಯಾಂಕು ಕಳೆದ ಶತಮಾನೋತ್ಸವ ಸಂದರ್ಭದಲ್ಲಿ ಶೇರುದಾರರಿಗೆ ನೀಡಿದ ಭರವಸೆಯನ್ನು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಹುಸಿಗೊಳಿಸಿದೆ ಎಂದು ಆರೋಪಿಸಿದ್ದಾರೆ.  

2019 ರಲ್ಲಿ ಜರುಗಿದ ಬ್ಯಾಂಕಿನ ಶತಮಾನೋತ್ಸವ ಸಮಾರಂಭದ ವೇದಿಕೆ ಮೇಲೆ ಬ್ಯಾಂಕಿನ ಚೇರಮನ್‌ರು ಸಾರ್ವಜನಿಕರ ಉಪಯೋಗಕ್ಕಾಗಿ ಅಂಬ್ಯುಲನ್ಸ್‌ನ್ನು  ಲೋಕರೆ​‍್ಣ ಮಾಡಿ,  ಕೀಯನ್ನು ಬಿಡುಗಡೆ ಗೊಳಿಸಿದರು. 2 ವರ್ಷ ಗತಿಸಿದರೂ ಅಂಬ್ಯುಲನ್ಸ್‌ ಸಾರ್ವಜನಿಕರ ಸೇವೆಗೆ ರಸ್ತೆಗಿಳಿದಿಲ್ಲ. ಕೊರೋನಾದಂತಹ ಸಂಕಷ್ಟಕಾಲದಲ್ಲಿಯೂ ಸಾರ್ವಜನಿಕರಿಗೆ, ಬಡವರಿಗೆ ಅಂಬ್ಯುಲನ್ಸ್‌  ಉಪಯೋಗವಾಗಲಿಲ್ಲ. 

ಶತಮಾನೋತ್ಸವ ಸಮಾರಂಭದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಹೊರತರುವ ಉದ್ದೇಶದಿಂದ ಜಾಹೀರಾತು ಪ್ರಕಟಣೆ ಮುಖಾಂತರ  ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಮುಖಾಂತರ 10-15 ಲಕ್ಷ ರೂ.ವರೆಗೆ ಹಣವನ್ನು ಸಂಗ್ರಹಿಸಲಾಗಿತ್ತು. ಆದರೆ ಸ್ಮರಣ ಸಂಚಿಕೆ ಪ್ರಕಟವಾಗದೇ, ಶೇರುದಾರರ, ಸಾರ್ವಜನಿಕರ ಹಾಗೂ ಸಂಘಸಂಸ್ಥರಗಳ ಕೈಗೆ ಇನ್ನೂ ತಲುಲಿಸದೇ  ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. 

ನಾಡಿನ ಪ್ರಸಿದ್ಧ ಬರಹಗಾರರಿಂದ, ಸಾಹಿತಿ, ಕವಿಗಳಿಂದ ಲೇಖನ, ಕವಿತೆಗಳನ್ನು ಆಹ್ವಾನಿಸಿ ತರಿಸಿಕೊಳ್ಳಲಾಗಿದೆ. ಸ್ಮರಣ ಸಂಚಿಕೆ ಹೊರಬರದ ಕಾರಣ ಲೇಖನ ನೀಡಿದ ಬರಹಗಾರರಿಗೆ ಹಾಗೂ ಬ್ಯಾಂಕಿನ ಓದುಗ ಗ್ರಾಹಕರಿಗೆ, ಶೇರುದಾರರಿಗೆ, ಸಾರ್ವಜನಿಕರಿಗೆ ಬ್ಯಾಂಕು ಅವಮಾನಿಸಿದೆ.  

ಶತಮಾನೋತ್ಸವ ಸಮಾರಂಭದ ಸವಿನೆನಪಿಗಾಗಿ ಪ್ರತಿ ಶೇರುದಾರರಿಗೆ ಬೆಳ್ಳಿ ನಾಣ್ಯವನ್ನು  ಉಡುಗೊರೆಯಾಗಿ ನೀಡುವುದಾಗಿ ಶೇರುದಾರರಿಂದ ಹಿಂದಿನ ವಾರ್ಷಿಕ ಮಹಾಸಭೆಯಲ್ಲಿ ಒಪ್ಪಿಗೆ ಪಡೆದು ಶತಮಾನೋತ್ಸವ ಸಮಾರಂಭದಲ್ಲಿ ನೀಡುವ ಭರವಸೆ ನೀಡಿದ್ದು  ಇಂದಿಗೂ ಇಂದಿಗೂ  ನಿರಾಶೆ ತಂದಿದೆ.   

ಶತಮಾನೋತ್ಸವ ಸಂದರ್ಭದಲ್ಲಿ ಸಾರ್ವಜನಿಕರನ್ನು ಬಳಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಶತಮಾನೋತ್ಸವ ಸಮಾರಂಭ ಮುಗಿದ ಬಳಿಕ ಶೇರುದಾರರಿಗೆ ಹಾಗೂ ಆಯಾ ಸಮಿತಿಯ ಪದಾಧಿಕಾರಿಗಳಿಗೆ ಸಂಗ್ರಹಿಸಿದ ಹಾಗೂ ಖರ್ಚು ಮಾಡಿದ ಹಣದ ಲೆಕ್ಕಪತ್ರವನ್ನು ಇಂದಿನವರೆಗೂ ನೀಡಿರುವುದಿಲ್ಲ.  

ನೇಕಾರರ ಅಭಿವೃದ್ಧಿಗಾಗಿ ನೇಕಾರರ ಆರ್ಥಿಕ ಸದೃಢತೆಗಾಗಿ ಶೇ. 3 ರ ಬಡ್ಡಿದರದಲ್ಲಿ ಸಾಲ ನೀಡುವ ಸರ್ಕಾರದ ಯೋಜನೆಯನ್ನು ಬ್ಯಾಂಕು  ಜಾರಿಗೆ ತರಲಿಲ್ಲ. ನೇಕಾರರ, ಬಡವರ ಅನುಕೂಲ ಮಾಡುವುದೇ ಬ್ಯಾಂಕು ಸ್ಥಾಪನೆಯ ಮೂಲ ಉದ್ದೇಶವಾಗಿತ್ತು.  ಆದರೆ ಕೋವಿಡ್‌ದಂತಹ ಸಂಕಷ್ಟ ಸಂದರ್ಭದಲ್ಲಿ ಬ್ಯಾಂಕು ಬಡ ಶೇರುದಾರರ ಹಾಗೂ ನೇಕಾರರ ಕುಟುಂಬಗಳಿಗೆ ಯಾವುದೇ ತುರ್ತು ಸೇವೆ ಮಾಡಲಿಲ್ಲ. ಈ ಎಲ್ಲ ಅಂಶಗಳನ್ನು ನೋಡಿದರೆ ಬ್ಯಾಂಕು ಶೇರುದಾರರಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡಿದ್ದು ಸ್ಪಷ್ಟವಾಗುತ್ತದೆ. ತಕ್ಷಣ ಬ್ಯಾಂಕಿನ ಅಧ್ಯಕ್ಷರು, ಹಿಂದಿನ ಹಾಗೂ ಇಂದಿನ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಸರಿಪಡಿಸಬೇಕು. ಇಲ್ಲದಿದ್ದರೆ ಬ್ಯಾಂಕಿನ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು  ಶ್ರೀಕಾಂತ ಮಲಜಿ, ಸುದೀರ ಗುಡ್ಡದ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ರಾಘು ಪತ್ತಾರ, ಪ್ರಕಾಶ ಮದ್ದಾನಿ,ಸಚಿನ ರಾಂಪೂರ, ವಿನಾಯಕ ಕತ್ತಿ, ರಾಜು ಹಳ್ಳಿ ಇದ್ದರು. 


ಸುದ್ದಿ ಓದಿ