ಅಥಣಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಬೆರಳೆಣಿಕೆ ಬಸ್ ಸಂಚಾರ.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಬೆರಳೆಣಿಕೆ ಬಸ್ ಸಂಚಾರ.

ಅಥಣಿ 09: ರಾಜ್ಯ ಸಾರಿಗೆ ನೌಕರರು 6ನೇ ವೇತನ ಜಾರಿ ಮಾಡುವಂತೆ ರಾಜ್ಯಾದ್ಯಂತ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಅಥಣಿಯಲ್ಲಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಪ್ರತಿಭಟನೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಇದರ ಮದ್ಯೆ ಅಥಣಿ ಕೆ ಎಸ್ ಆರ್‍ಟಿ ಸಿ ಘಟಕದಿಂದ ಶುಕ್ರವಾರ ಏಳು ಬಸ್ ಸಂಚಾರ ಪ್ರಾರಂಭ ಮಾಡಲಾಗಿದೆ.

ಇದರ ಮಧ್ಯೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಪ್ರಯಾಣ ಮಾಡುತ್ತಿದ್ದಾರೆ, ಸರ್ಕಾರ ಒಂದು ಕಡೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಖಾಸಗಿ ವಾಹನ ಮಾಲಿಕರು ಪ್ರಯಾಣಿಕರು ತುಂಬುವರಿಗೆ ವಾಹನ ಬಿಡುಗಡೆ ಮಾಡುತ್ತಿಲ್ಲ. ಇದರ ಮದ್ಯೆ ಕೊರೊನಾ ಸಂಕಷ್ಟ ಭಯ ಕಾಡುತ್ತಿದೆ ಎಂದು ಪ್ರಾಮಾಣಿಕರು ಅಳಲು ತೋಡಿಕೊಂಡರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರಿನಲ್ಲಿ ಮೂರು ದಿನದಿಂದಲೂ ಬಸ್ ಸಂಚಾರ ಇಲ್ಲದೆ ತೀವ್ರವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಸರ್ಕಾರ ಕೂಡಲೇ ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲೆಂದು ಜನರು ಆಗ್ರಹಿಸಿದರು.


ಸುದ್ದಿ ಓದಿ