ಚೆನ್ನಾಗಿ ಪರೀಕ್ಷೆ ಬರೆಯದ್ದಕ್ಕೆ ವಿಷ ಸೇವಿಸಿ ವಕೀಲೆ ಆತ್ಮಹತ್ಯೆ
ಬೈಲಹೊಂಗಲ 26: ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆದು ಪ್ರಾರಂಭಿಕ ಹಂತ ಉತ್ತೀರ್ಣವಾಗಿ ಎರಡನೆ ಹಂತದ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಒಂದು ವಿಷಯದಲ್ಲಿ ಚೆನ್ನಾಗಿ ಬರೆಯಲು ಆಗದ್ದಕ್ಕೆ ಮನನೊಂದು, ನಾನು ನ್ಯಾಯಾಧೀಶೆ ಆಗುವುದಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡ ವಕೀಲೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟಣೆ ನಡೆದಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂದಗಡೆಯ ವಿದ್ಯಾಗಿರಿ ನಗರದ ನಿವಾಸಿ, ವಿದ್ಯಾ ಸಚಿನ ಬೊಂಗಾಳೆ (29) ಬಸವೇಶ್ವರ ಆಶ್ರಯ ಕಾಲನಿಯ ತನ್ನ ತವರು ಮನೆಯಲ್ಲಿ ಪರೀಕ್ಷೆಗೆ ತಯಾರಿ ನಡೆಸಿ, ನ.18, 19 ರಂದು ಪರೀಕ್ಷೆ ಬರೆದಿದ್ದಳು. ಪರೀಕ್ಷೆಯಲ್ಲಿ ಯಶ ಕಾಣುವುದಿಲ್ಲ ಎಂಬ ಆತಂಕದಿಂದ ತನ್ನ ಜೀವನದ ಮೇಲೆ ಜಿಗುಪ್ಸೆಗೊಂಡು ನ.24 ರಂದು ತನ್ನ ತವರು ಮನೆಯಲ್ಲಿ ಇಲಿ ಪ್ರಾಶಾಣ ಸೇವಿಸಿದ್ದಳು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಸಾವನ್ನಪ್ಪಿದ್ದಾಳೆ.
ಈ ಕುರಿತು ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯ ನೋಟರಿ ಸಂಘದ ಕಾರ್ಯದರ್ಶಿ ಸಿ.ಎಸ್. ಚಿಕ್ಕನಗೌಡರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಉಪಾಧ್ಯಕ್ಷ ಎ.ಎಂ. ಶಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ. ಕಟದಾಳ, ಸಹ ಕಾರ್ಯದರ್ಶಿ ವಿ.ಸಿ. ಪೂಜೇರ ಆಡಳಿತ ಮಂಡಳಿ ಹಾಗೂ ಸದಸ್ಯರು ಚಿಕ್ಕ ವಯಸ್ಸಿನಲ್ಲೆ ಸಾವನ್ನಪ್ಪಿದ ವಕೀಲೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.