ಅದ್ದೂರಿ ಕನ್ನಡ ರಾಜ್ಯೋತ್ಸವ ಕನ್ನಡ ಸಂಸ್ಕೃತಿ ಇಮ್ಮಡಿ ಕನ್ನಡಿಗರಿಂದಲೇ ಸಾಧ್ಯ :ಹೊಸ ಗೌಡ್ರ
ಅದ್ದೂರಿ ಕನ್ನಡ ರಾಜ್ಯೋತ್ಸವ ಕನ್ನಡ ಸಂಸ್ಕೃತಿ ಇಮ್ಮಡಿ ಕನ್ನಡಿಗರಿಂದಲೇ ಸಾಧ್ಯ :ಹೊಸ ಗೌಡ್ರ
ರಾಣೇಬೆನ್ನೂರು 07 :ಕನ್ನಡ, ಕನ್ನಡಿಗರು ಮತ್ತು ಕನ್ನಡದ ಸಂಸ್ಕೃತಿಗೆ ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಇಂದಿನ ಯುವ ಸಮುದಾಯ ಇತಿಹಾಸದ ಪರಿಕಲ್ಪನೆಯಲ್ಲಿ ಸಾಗಿದಾಗ ಮಾತ್ರ ಕನ್ನಡ, ಕನ್ನಡ ಸಂಸ್ಕೃತಿ, ನಾಡು ನುಡಿ ನೆಲ ಜಲ ಭಾಸೆ ಉಳಿಯಲು ಸಾಧ್ಯ ಎಂದು ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಹೇಳಿದರು. ಅವರು, ಇಲ್ಲಿನ ಬಸ್ ಸ್ಟ್ಯಾಂಡ್ ಬಳಿಯ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ, ಅಭಿಮಾನಿ ಬಳಗಮತ್ತು ಆಟೋ ಚಾಲಕ ಮತ್ತು ಮಾಲಕರ ಸಂಘವು ಆಯೋಜಿಸಿದ್ದ, 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆಟೋ ಚಾಲಕರು ಮತ್ತು ಮಾಲಕರು, ಜನರ ಸೇವೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು, ಹಗಲು ರಾತ್ರಿ ಎನ್ನದೆ, ತಮ್ಮ ಕರ್ತವ್ಯವನ್ನು ನಿಭಾಯಿಸುವ ಶ್ರಮಜೀವಿಗಳು. ಕರ್ತವ್ಯದ ಜೊತೆಗೆ ನಾಡು, ನುಡಿ, ಗಡಿ ಮತ್ತು ಭಾಷೆ ಸಂಸ್ಕೃತಿಗೆ ಧಕ್ಕೆ ಬಂದಾಗ ಸದಾ ಮುಂದೆ ಇರುವ ಕಾಯಕ ಜೀವಿಗಳು ಎಂದರು. ಮುಖ್ಯ ಅತಿಥಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್.ಬುರಡಿಕಟ್ಟಿ ಅವರು, ಆಟೋ ಚಾಲಕ - ಮಾಲಕರ ದೇಶ ಮತ್ತು ನಾಡ ಪ್ರೇಮ, ಭವಿಷ್ಯದ ಯುವ ಸಮುದಾಯ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ತಾವು ದುಡಿದದ್ದರಲ್ಲಿ ಒಂದು ಭಾಗವನ್ನು, ಅತ್ಯಂತ ಪ್ರೀತಿ,ವಿಶ್ವಾಸ,ಅಭಿಮಾನ ಮತ್ತು ಕನ್ನಡ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವುದು, ಶ್ಲಾಘನೀಯ ಕಾರ್ಯವಾಗಿದೆ ಎಂದು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ, ಹನುಮಂತಪ್ಪ ಕಬ್ಬಾರ್, ಬಸವರಾಜ ಕೊಂಗಿ, ಶ್ರೀನಿವಾಸ ಹಳ್ಳಳ್ಳಿ, ನಾರಾಯಣ ನಾಯಕ ಎಸ್, ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದ, ಆಟೋ ಸಂಘದ ಅಧ್ಯಕ್ಷ ದೇವೇಂದ್ರ್ಪ ಗುತ್ತೆಪ್ಪ ಕಾಟಿ ಅವರು, ಆಟೋ ಚಾಲಕರು ಮತ್ತು ಮಾಲಕರು, ಇಂದಿನ ದಿನಮಾನಗಳಲ್ಲಿ ಅನೇಕ ಸಮಸ್ಯೆಗಳು ಎದುರಿಸುವಂತಾಗಿದೆ., ಆಸಂಘಟಿತ ರೂಪದಲ್ಲಿ ಕಾರ್ಮಿಕರಾಗಿರುವ ಚಾಲಕರು ಬಹುತೇಕ ಬಡವರೇ ಇದ್ದಾರೆ.ಸಮಾಜ ಸೇವಕರೆಂದು ಗುರುತಿಸಿ, ನಗರಸಭೆ, ಮತ್ತು ಸರಕಾರ ನಿವೇಶನ, ವಸತಿ, ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವಾ ಚಾಲಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಚಾಮರಾಜ ಬ. ಪಾಟೀಲ್, ಕಾನೂನು ಸಲಹೆಗಾರ ಕೆ ಎನ್. ಕೋರದಾನ್ಯಮಠ, ಉಪಾಧ್ಯಕ್ಷ ವಿನಯ್ ಚವ್ಹಾಣ, ಕಾರ್ಯದರ್ಶಿಗಳಾದ ಶಶಿಕುಮಾರ್ ಚಳಗೇರಿ, ರಮೇಶ್ ಕುರುವತ್ತಿ, ಸಂ. ಕಾರ್ಯದರ್ಶಿ ಮಲ್ಲಿಕಾರ್ಜುನ ಬುರಡಿಕಟ್ಟಿ,ಖಜಾಂಚಿ ಮಂಜಣ್ಣ ಕೋಲಕಾರ್, ಸದಸ್ಯರಾದ, ಮಂಜುನಾಥ್ ಮಾಯಣ್ಣನವರ್, ರಾಜಶೇಖರ ಸಂಧ್ಯಾಳ, ಚಂದ್ರ್ಪ ಗುಡಿಯವರ, ದುರ್ಗಪ್ಪ ಸುಂಕಾಪುರ, ನಾಗರಾಜ್ ಲಿಂಗದಹಳ್ಳಿ ಸೇರಿದಂತೆ ಮತ್ತಿತರ ಮುಖಂಡರು, ಚಾಲಕರು ಮಾಲಕರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ, ಶೃಂಗರಿಸಿದ, ಕನ್ನಡ ಸಂಸ್ಕೃತಿ ಪ್ರತಿಬಿಂಬಿತ ನೂರಾರು ಆಟೋಗಳ, ಭವ್ಯ ಮೆರವಣಿಗೆಯು, ನಗರದ ಪ್ರಮುಖ ಬೀದಿಗಳಲ್ಲಿ, ಸಂಚರಿಸಿ, ಕನ್ನಡ ಜಾಗೃತಿಗೊಳಿಸುವಲ್ಲಿ ಯಶಸ್ವಿ ಕಂಡವು. ಈ ನಿಮಿತ್ತ ಸಾವಿರಾರು ಅನ್ನಸಂತರೆ್ಣ ಕಾರ್ಯಕ್ರಮ ಏರಿ್ಡಸಿ ಜನಮನ್ನಣೆಗೆ ಪಾತ್ರರಾಗಿದ್ದರು.