ಬಳ್ಳಾರಿ

"ಸ್ವಚ್ಚತೆಯೇ ಸೇವೆ" ಅಭಿಯಾನಕ್ಕೆ ಚಾಲನೆ - ಕುಲಸಚಿವರು ಡಾ. ಎ. ಸುಬ್ಬಣ್ಣ ರೈ

"ಸ್ವಚ್ಚತೆಯೇ ಸೇವೆ" ಅಭಿಯಾನಕ್ಕೆ ಚಾಲನೆ - ಕುಲಸಚಿವರು ಡಾ. ಎ. ಸುಬ್ಬಣ್ಣ ರೈ

 ಬಳ್ಳಾರಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮಹತ್ವಕಾಂಕ್ಷಿ ಯೋಜನೆಯಾದ "ಸ್ವಚ್ಚತೆಯೇ ಸೇವೆ" ಅಭಿಯಾನಕ್ಕೆ ಕನ್ನಡ ವಿಶ್ವವಿದ್ಯಾಲಯದ  ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡುತ್ತಾ ಕೇಂದ್ರ ಸರ್ಕಾರವು ಕೈಗೊಂಡಿರುವ ಈ ಅಭಿಯಾನ ತುಂಬಾ ಮಹತ್ವಪೂರ್ಣವಾದದ್ದು. ದಿನಾಂಕ: 11.09.2019 ರಿಂದ 27.10.2019ರ ವರೆಗೆ ನಿಗದಿತ ದಿನಗಳಿಗೆ ಸೀಮಿತವಾಗದೆ ನಮ್ಮ ದಿನನಿತ್ಯದ ಚಟುವಟಿಕೆಯ ಒಂದು ಭಾಗವಾಗಿ ಸ್ವಯಂ ಪ್ರೇರಣೆಯಿಂದ ಕಾರ್ಯರೂಪಗೊಂಡಾಗ ನಾವು ಸುಂದರ ಪರಿಸರವನ್ನು ಕಾಣಲು ಸಾಧ್ಯ. ಇದರಿಂದ ನಮ್ಮೆಲ್ಲರ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸ್ವಯಂ ಪ್ರೇರಣೆಯಿಂದ ನಿಷೇದಗೊಳಿಸಿದ ಪ್ಲಾಸ್ಟಿಕ್ನಿಂದ ಉಂಟಾಗುವ ಪರಿಸರದ ಮೇಲಿನ ದುಷ್ಪರಿಣಾಮದ ಕುರಿತು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರೆ ರಾಷ್ಟ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಅಧ್ಯಯನಾಂಗದ ನಿರ್ದೇಶಕರಾದ ಡಾ. ಹೆಬ್ಬಾಲೆ ಕೆ. ನಾಗೇಶ್, ಸಮಾಜ ವಿಜ್ಞಾನ ನಿಕಾಯದ ಡೀನ್ರಾದ ಡಾ. ಕೆ. ಕೇಶವನ್ ಪ್ರಸಾದ್, ರೂಸಾ ಕಮಿಟಿ ಸಂಯೋಜನಾಧಿಕಾರಿಯಾದ                            ಡಾ. ಸಿ.ಟಿ. ಗುರುಪ್ರಸಾದ್, ಪ್ರಸಾರಾಂಗದ ನಿರ್ದೇಶಕರಾದ ಡಾ. ಎಚ್.ಡಿ. ಪ್ರಶಾಂತ, ಉಪಕುಲಸಚಿವರಾದ ಡಾ. ಎ.ವೆಂಕಟೇಶ, ಸಹಾಯಕ ಕುಲಸಚಿವರಾದ ಬಿ.ಗುರುಬಸಪ್ಪ, ವಿವಿಧ ನಿಕಾಯಗಳ ಪ್ರಾಧ್ಯಾಪಕರು ಹಾಗೂ ಆಡಳಿತ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಚಗೊಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ``ಸ್ವಚ್ಚತೆಯೇ ಸೇವೆ'' ಅಭಿಯಾನ-2019ರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬೋಧಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಸುದ್ದಿ ಓದಿ