ರಾಣೆಬೆನ್ನೂರ

ಮಾದರಿ ಕಿರು ಜಲಾನಯನ ಪ್ರದೇಶ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಾದರಿ ಕಿರು ಜಲಾನಯನ ಪ್ರದೇಶ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಾಣಿಬೆನ್ನೂರ 12:  ಕಾರ್ಮಿಕರಿಗೆ ಹಾಗೂ ರೈತರಿಗೆ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ  ಯೋಜನೆ ವರದಾನವಾಗಿದ್ದು ನೈಸರ್ಗಿಕ ಸಂಪನ್ಮೂಲಗಳಾದ ನೀರು ಸಂರಕ್ಷಣೆ ಜೊತೆಗೆ ಮಣ್ಣು, ಕಾಡು, ಕೃಷಿ ಪೂರಕವಾದ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಗಳು ಹಾಗೂ ಇತರೆ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಕ ಅಧಿಕಾರಿ ಅಕ್ಷಯ ಶ್ರೀಧರ ಕೇಳಿದರು. 

ತಾಲೂಕಿನ  ಗುಡ್ಡದಹೊಸಳ್ಳಿಯಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿಯಲ್ಲಿ 27 ಲಕ್ಷ ಕ್ರಿಯಾಯೋಜನೆಯನ್ನು ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರಾಣೆಬೆನ್ನೂರು ಇವರ ಸಹಕಾರದೊಂದಿಗೆ ಮಾದರಿ ಜಲಾನಯನ ಅಭಿವೃದ್ದಿಯಲ್ಲಿ ರೈತರ ಜಮೀನಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಮಾದರಿ ಕಿರು ಜಲಾನಯನ ಪ್ರದೇಶ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. 

ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮುಖ್ಯಸ್ಥ ಎಸ್‌.ಡಿ ಬಳಿಗಾರ ಮಾತನಾಡಿ, ಸಂಸ್ಥೆಯು ಕಾರ್ಮಿಕರ ವಲಸೆ ತಪ್ಪಿಸಲು ಬಡಜನರ ಜೀವನೋಪಾಯ ಕಾಯಕ ಜಲಾನಯನ ಅಭಿವೃದ್ದಿ ಮೂಲಕ ಜಿಲ್ಲೆಯಲ್ಲಿ ಬೇರೆ ಬೇರೆ ತಾಲೂಕಿನಲ್ಲಿ ವಿವಿಧ ಪಂಚಾಯತನಲ್ಲಿ ನಮೂನೆ 6 ಕೊಡಿ ಕೆಲಸ ಪಡಿ ವಲಸೆ ತಡಿ ಅಂದೋಲನ ರೂಪವಾಗಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಿತ್ತಿದೆ. ಇನ್ನೂ 50,000 ಸಾವಿರ ಕಾರ್ಮಿಕರ ಸಂಘಟನೆ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಹೇಳಿದರು. 

ತಾಪಂ ಇಓ ಸುಮಲತಾ ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ಮಹಿಳೆಯರಿಗೆ ಸಮಾನ ಕೂಲಿ ಇದ್ದು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಕೆಲಸಕ್ಕೆ ಬರಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ತಾಪಂ ಸಹಾಯಕ ನಿದೇಶಕ ಪರಶುರಾಮ ಪೂಜಾರ ಇವರು, ಬರಗಾಲ ಹಾಗೂ ಬೇಸಿಗೆಯಲ್ಲಿ ಕಾರ್ಮಿಕರಿಗೆ ಶೇ.30ಅ ರಷ್ಟು ರಿಯಾಯತಿಯ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಅರವಿಂದ ಹಾಗೂ ಇಂಜಿನಿಯರ್ ಲತಾ, ಜಿ.ಪಿ. ನದಾಫ್, ನವೀನ್ ಛತ್ರದಮಠ ಮತ್ತು ಬಿ.ಎಫ್‌.ಟಿಗಳು, ನರೆಗಾ ಕಾರ್ಮಿಕರು, ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು. 


ಸುದ್ದಿ ಓದಿ