ಶಿಗ್ಗಾವ್

ವಿಶ್ವ ತಂಬಾಕು ರಹಿತ ದಿನಾಚರಣೆ ಜಾತಾ ಕಾರ್ಯಕ್ರಮಕ್ಕೆ ಚಾಲನೆ

ವಿಶ್ವ ತಂಬಾಕು ರಹಿತ ದಿನಾಚರಣೆ ಜಾತಾ ಕಾರ್ಯಕ್ರಮಕ್ಕೆ ಚಾಲನೆ

ಶಿಗ್ಗಾವಿ 31:  ತಾಲೂಕ ಆಡಳಿತ ಕಾರ್ಯಾಲಯ ಹಾಗೂ ಸಾರ್ವಜನಿಕ ಆಸ್ಪತ್ರೆ  ಶಿಗ್ಗಾವಿ  ಇವರ ಸಂಯುಕ್ತಾಶ್ರಯದಲ್ಲಿವಿಶ್ವ ತಂಬಾಕು ರಹಿತ ದಿನಾಚರಣೆ ಜಾತಾ ಕಾರ್ಯಕ್ರಮಕ್ಕೆ  ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ. ಪಿ.ಹೆಚ್ ಚಾಲನೆ ನೀಡಿದರು.         

 ನಂತರ ಮಾತನಾಡಿದ ಅವರು ಇಂದು ತಂಬಾಕು ಉತ್ಪನ್ನಗಳಿಗೆ ಯುವಕರು ಹೆಚ್ಚು ಮಾರು ಹೋಗುತ್ತಿದ್ದು ಆದ್ದರಿಂದ  ಯುವಕರಿಗೆ ಹೆಚ್ಚಿನ ಅರಿವು ಮೂಡಿಸಲು ದೃಷ್ಟಿಯಿಂದ ಇಂತಹ ಜಾಥಾ ಹಾಗೂ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮುಖ್ಯ ಎಂದರು.        ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ.ಎ.ಆರ್ ಮಾತನಾಡಿ  ಇಂದಿನ ಒತ್ತಡ ಜೀವನದಲ್ಲಿ ತಂಬಾಕನಂತಹ ಪದಾರ್ಥಗಳಿಗೆ ಬಲಿಯಾಗಿ ಕ್ಯಾನ್ಸರನಂತಹ   ರೋಗಗಳಿಗೆ ತುತ್ತಾಗುತ್ತಿದ್ದು ಆದ್ದರಿಂದ ಇಂತಹ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.  ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ,  ರಾಮನಗೌಡ ಪಾಟೀಲ, ಗುರು ಹಾಗಲೂರ, ಕೆಮ್ಮಣಕೇರಿ,  ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ