ರಾಣೆಬೆನ್ನೂರ

ದಿ.ಕೆ.ಎಫ್‌. ಪಾಟೀಲ್‌ಜಿಯವರ ಜನ್ಮ ದಿನಾಚರಣೆ ಕಾರ‌್ಯಕ್ರಮ

ದಿ.ಕೆ.ಎಫ್‌. ಪಾಟೀಲ್‌ಜಿಯವರ ಜನ್ಮ ದಿನಾಚರಣೆ ಕಾರ‌್ಯಕ್ರಮ

ರಾಣಿಬೆನ್ನೂರ 07:  ಕೆ.ಎಫ್‌. ಪಾಟೀಲಿಜಿಯವರ ಆದರ್ಶ ಜೀವನ, ಸಾಮಾಜಿಕ ಕಳಕಳಿ, ಸ್ತ್ರೀ ಶಿಕ್ಷಣ ಹಾಗೂ ಅವರ ದೇಶ ಪ್ರೇಮಗಳಂತ ಗುಣಗಳನ್ನು ಮರೆಯುವಂತಿಲ್ಲ ಎಂದು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡರ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ದಿ.ಕೆ.ಎಫ್‌. ಪಾಟೀಲ್‌ಜಿಯವರ 119ನೇ ಜನ್ಮ ದಿನಾಚರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಹಾಗೂ ಗೌರವಗಳನ್ನು ಪಡೆದುಕೊಳ್ಳಲು ಶಿಕ್ಷಣದ ಅಗತ್ಯವಿದೆ ಹಾಗಾಗಿ ಅವರು ಮಹಿಳೆಯರ ಸಬಲೀಕರಣಕ್ಕೆ ಕಟ್ಟಿದ ಈ ಸಂಸ್ಥೆ ಅಪಾರವಾದ ಕೊಡುಗೆಯುನ್ನು ನೀಡಿದೆ ಎಂದರು.. 

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಬಿ.ಎಸ್‌. ಪಟ್ಟಣಶಟ್ಟಿ, ವೀರಣ್ಣ ಅಂಗಡಿ, ಆರ್‌.ಜಿ. ಹುಲಮನಿ, ಜಯಣ್ಣ ಜಂಬಗಿ ಹಾಗೂ  ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ