ಕಾಗವಾಡ

ಸಮುದಾಯ ಭವನ ಕಟ್ಟಡಕ್ಕೆ ಅಡಿಗಲು ಪೂಜೆ

ಸಮುದಾಯ ಭವನ ಕಟ್ಟಡಕ್ಕೆ ಅಡಿಗಲು ಪೂಜೆ

ಕಾಗವಾಡ 24: ತಾಲೂಕಿನ ಮಂಗಸುಳಿ ಗ್ರಾಮದ ಭಗವಾನ ಆದಿನಾಥ್ ದಿಗಂಬರ್ ಜೈನ ಮಂದಿರಕ್ಕೆ ಶಾಸಕ ಶ್ರೀಮಂತ ಪಾಟೀಲರು ಅಲ್ಪಸಂಖ್ಯಾತ ಸಚಿವರ ಅಧಿಕಾರ ಅವದಿಯಲ್ಲಿ 15 ಲಕ್ಷ ರೂ. ಅನುದಾನ ಮಂಜೂರಾತಿ ನೀಡಿದ್ದರು. ಅನುದಾನ ಬಳಸಿ ಸಮುದಾಯ ಭವನ ಕಟ್ಟಡಕ್ಕೆ ಜೈನ ಸಮಾಜದ ಮುಖಂಡರು ಹಾಗು ಶಾಸಕರ ಆಪ್ತಸಾಹಾಯಕ ಸಚೀನ ದೇಸಾಯಿ ದಂಪತಿಗಳು ಪೂಜೆ ನೆರವೇರಿಸಿ ಚಾಲನೆ ನೀಡಿದರು. 

ಮಂಗಳವಾರ ದಿ. 23ರಂದು ಮಂಗಸುಳಿ ಗ್ರಾಮದ ಭಗವಾನ ಆದಿನಾಥ್ ದಿಗಂಬರ್ ಜೈನ ಮಂದಿರದಲ್ಲಿ ಅಡಿಗಲು ಪೂಜಾ ಕಾರ್ಯಕ್ರಮ ನೆರವೇರಿತು. ಕಳೆದ ಅನೇಕ ವರ್ಷಗಳಿಂದ ಜೈನ ಸಮಾಜ ಬಾಂಧವರ ಬೇಡಿಕೆಯನ್ನು ಶಾಸಕ ಶ್ರೀಮಂತ ಪಾಟೀಲರು ಪೂರ್ಣಗೊಳಿಸಿದರು. 

 ಜೈನ ಸಮಾಜದ ಮುಖಂಡರು ಹಾಗೂ ಶಾಸಕರ ಆಪ್ತಸಹಾಯಕ ಸಚೀನ ದೇಸಾಯಿ ಇವರು ವಿಶೇಷ ಪ್ರಯತ್ನಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ರಾಜೇಂದ್ರ ಪಟ್ಟಣಶೆಟ್ಟಿ, ಸಂಜಯ್ ಪಟ್ಟಣಶೆಟಿ,್ಟ ಅಮರ ಪಟ್ಟಣಶೆಟ್ಟಿ, ಶೀತಲ ಪಟ್ಟಣಶೆಟ್ಟಿ, ಪಾರ್ಶ್ವನಾಥ ದೇಸಾಯಿ, ಮಹಾವೀರ್ ದೇಸಾಯಿ, ರಾಜು ಶೆಟ್ಟಿ, ಸುಭಾಷ್ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಭರತ್ ಶೆಟ್ಟಿ, ಸುಜಾತ ಪಟ್ಟಣಶೆಟ್ಟಿ, ಪ್ರತಿಭಾ ಶೆಟ್ಟಿ, ಶಾಂತಿನಾಥ ದೇಸಾಯಿ, ಪೋಪೆಟ್ ದೇಸಾಯಿ ಮತ್ತಿತರ ಜೈನ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ