ಚರಂಡಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಗುದ್ದಲಿ ಪೂಜೆ
ಕಾಗವಾಡ 13: ಪಟ್ಟಣದ ಬಸವನಗರ ಹಾಗೂ ಸಿದ್ಧೇಶ್ವರ ಕಾಲನಿಯ ನಾಗರಿಕರಿಗಾಗಿ 1.35 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಿಸುವ ಕಾಮಗಾರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶನಿವಾರ ಸಂಜೆ ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿಯವರು ಚರಂಡಿ ನಿರ್ಮಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡುವಾಗ, ಕಳೇದ ಅನೇಕ ವರ್ಷಗಳಿಂದ ಇಲ್ಲಿಯ ನಾಗರಿಕರು ಚರಂಡಿ ನಿರ್ಮಿಸಲು ತಮ್ಮ ಬೇಡಿಕೆ ಸಲ್ಲಿಸುತ್ತಿದ್ದರು. ಆದರೆ ಅವರ ಇಚ್ಛೆ ಪೂರ್ಣಗೊಳ್ಳಲಿಲ್ಲಾ. ಶಾಸಕ ಶ್ರೀಮಂತ ಪಾಟೀಲರು ವಿಶೇಷ ಅನುದಾನ ಮಂಜೂರುಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇವರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕಂಡರೆ, ನಾನು ಕಂಡಿದ್ದ ಅಪರೂಪದ ಶಾಸಕವೆಂದರೆ ಶ್ರೀಮಂತ ಪಾಟೀಲರು ಎಂದು ಹೇಳಿ ಶ್ಲಾಘೀಸಿದರು.
ಶಾಸಕರು ಲೋಕೋಪಯೋಗಿ ಅಭಿಯಂತರರಿಗೆ ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದರು.
ನಂತರ ಮಾತನಾಡಿ, ನಿಮ್ಮೆಲ್ಲರ ಆಶಿರ್ವಾದದಿಂದ ನಾನು ಶಾಸಕನಾಗಿದ್ದೇನೆ. ಸಚಿವನು ಕೂಡ ಆಗಿದ್ದೆ, ನಾನು ಶಾಸಕನಾಗಿದ್ದರೂ ಕೂಡ 24 ಗಂಟೆಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ರಸ್ತೆ ಅಭಿವೃದ್ಧಿ ಹಾಗೂ ಮತ್ತಿತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಸವಾಂರ್ಗೀಣ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದೆ, ಆದುದ್ದರಿಂದ ತಮ್ಮೆಲ್ಲರ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲೆವಿರಲಿ ಎಂದರು.
ಈ ವೇಳೆ ಕಾಗವಾಡದ ಶಾಸಕರ ಕೇಂದ್ರ ಕಚೇರಿಯ ವತಿಯಿಂದ ಸಾರ್ವಜನಿಕರಿಗೆ ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನದ ಫಲಾನುಭವಿಗಳಿಗೆ ಪರಮಪೂಜ್ಯರು ಹಾಗೂ ಶಾಸಕರ ಹಸ್ತದಿಂದ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಸಮಾರಂಭದಲ್ಲಿ ಹಿರಿಯ ಮುಖಂಡರಾದ ಸುಭಾಷ ಕಠಾರೆ, ರೇವಣ್ಣಾ ಪಾಟೀಲ, ರವಿ ಪಾಟೀಲ, ರಾಜು ಕುಸನಾಳೆ, ಸಚಿನ ಕವಟಗೆ, ಪ್ರಕಾಶ ಚೌಗಲಾ, ಬಾಬಾಸಾಬ ಚೌಗುಲೆ, ವಿಠ್ಠಲ ಪವಾರ, ಕಾಕಾಸಾಬ ಚೌಗುಲೆ, ದೀಲೀಪ ಪವಾರ, ಎಸ್.ಓ.ಹಲಸಗಿ, ಬಿ.ಎ.ಪಾಟೀಲ, ಜಿ.ಜಿ.ಕರ್ಲಟ್ಟಿ, ಎಸ್.ಎಸ್.ಬಾಗನೆ, ಅರುಣ ಜೋಷಿ, ಪ್ರಕಾಶ ದೊಂಡಾರೆ, ದೀಪಕ ಕಾಂಬಳೆ, ವಿನೋದ ದೇವನೆ, ಬಾಳು ಕಾಂಬಳೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ.ಎ.ಹಿರೇಮಠ, ಗುತ್ತಿಗೆದಾರರಾದ ರಾಜು ಅಳಬಾಲ, ಎಂ.ಬಿ.ಪಾಟೀಲ, ಸಹಾಯಕ ಇಂಜಿನಿಯರ್ ಮಲ್ಲಿಕಾರ್ಜುನ ಮಗದುಮ್, ಸೇರಿದಂತೆ ಮತ್ತಿತರ ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.