ರಾಣೆಬೆನ್ನೂರ

ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ

ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ

ರಾಣಿಬೆನ್ನೂರ 10: ಶ್ರೀಸಾಮಾನ್ಯರಿಗಾಗಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡುವ ಮೂಲಕ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಸೋಮವಾರ ತಾಲೂಕಿನ ಹಲಗೇರಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಸಮ್ಮಸಗಿ ರಸ್ತೆಗೆ ಕೆಎಎಸ್‌ಪಿ ಯೋಜನೆಯಡಿಯಲ್ಲಿ ಅಂದಾಜು 2 ಕೋಟಿ  ರೂ ವೆಚ್ಚದಲ್ಲಿ 4 ಕಿಮಿ ಉದ್ದ ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ  ಅವರು, ತಾಲೂಕಿನ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು. 

ಜಿಪಂ ಮಾಜಿ ಸದಸ್ಯ ಶಿವಾನಂದ ಕನ್ನಪ್ಪಳವರ, ಬಸವರಾಜ ಕಡೂರ,  ಲೋಕೋಪಯೊಗಿ ಇಲಾಖೆಯ ಎಇಇ ಮರಿಸ್ವಾಮಿ, ಸಹಾಯಕ ಅಭಿಯಂತರ ರಮೇಶ ನಾಯಕ, ಗುತ್ತಿಗೆದಾರ ಮಲ್ಲಿಕಾರ್ಜುನ ಹಾವೇರಿ, ನೆಸ್ವಿ, ಚಂದ್ರ​‍್ಪ ಸೇರಿದಂತೆ ಹಾಲಿ ಮಾಜಿ ಗ್ರಾಪಂ ಸದಸ್ಯರುಗಳು ಮತ್ತು ಗ್ರಾಸ್ಥರು ಇದ್ದರು. 


ಸುದ್ದಿ ಓದಿ