ಇಂಡಿ

ನೂತನ ಶಾಲಾ ಕಟ್ಟಡಕ್ಕೆ ಭೂಮಿ ಪೂಜಾ

ನೂತನ  ಶಾಲಾ ಕಟ್ಟಡಕ್ಕೆ ಭೂಮಿ ಪೂಜಾ

ಇಂಡಿ23: ಸರಕಾರಿ ಇಲಾಖೆಯ ಸೌಲಭ್ಯಗಳನ್ನು  ಬಳಸಿಕೊಂಡು ಗ್ರಾಮಸ್ಥರು ಶಿಕ್ಷಣದಿಂದ ಸಮುದಾಯ ಅಭಿವೃದ್ಧಿಯತ್ತ ಗಮನ ಹರಿಸಬೇಕು,  ಶಾಲೆ ಜೀವಂತ ದೇವರ ಗುಡಿ ಇದ್ದ ಹಾಗೆ ಈ ಶಾಲೆಯ ಕಟ್ಟಡ ಒಳ್ಳೆಯ ಗುಣಮಟ್ಟದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಲಿದ್ದು ಗ್ರಾಮಸ್ಥರು ಸಹಕಾರ ನೀಡಬೇಕು  ಎಂದು ಲೋಕೋಪಯೋಗಿ ಎಇಇ ದಯಾನಂದ ಮಠ ಹೇಳಿದರು. 

ಅವರು ಶನಿವಾರ ತಾಲೂಕಿನ ಇಂಗಳಗಿ ಎಲ್‌ಟಿ-2 ಗ್ರಾಮದಲ್ಲಿ  2020-21ನೇ ಸಾಲಿನ ಲೆಕ್ಕ ಶೀರ್ಷಿಕೆ ನರ್ಬಾಡ ಆರ್‌.ಆಯ್‌.ಡಿ.ಎಫ್ 25ಅಡಿಯಲ್ಲಿ  ನಿರ್ಮಾಣ ಮಾಡುತ್ತಿರುವ ಕಿರಿಯ ಪ್ರಾಥಮಿಕ ಶಾಲೆಯ   ನೂತನ  ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಗ್ರಾಪಂ ಅಧ್ಯಕ್ಷ ಹಣಮಂತ ಗುಡ್ಲ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪ್ರಸ್ತುತ ಇರುವ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಾಗಿದ್ದು ಅದನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸುಂದರವಾದ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದರು. 

 ಎಇ ಎಮ್‌.ಎಮ್‌.ಸಂಜವಾಡ, ಗುತ್ತಿಗೆದಾರ ಬಿ.ಬಿ.ಪಾಟೀಲ, ಶೇಖರ ಶಿವಶರಣ, ಎಸ್‌ಡಿಎಮ್‌ಸಿ ಅಧ್ಯಕ್ಷ ಶಿವಾಜಿ ರಾಠೋಡ, ಲೋಕಸಿಂಗ ರಾಠೋಡ, ಗ್ರಾಪಂ ಸದಸ್ಯ ಶ್ರೀಮತಿ ಬೇಬಿ ರಾಠೋಡ, ಪಿಕು ರಾಠೋಡ, ಮಾಜಿ ಗ್ರಾಪಂ ಉಪಾಧ್ಯಕ್ಷ ವಿಠ್ಠಲ ರಾಠೋಡ, ಶಿಕ್ಷಕಿ ಶ್ರೀಮತಿ ದೇಸಾಯಿ, ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಪೋಟೊ ಕ್ಯಾಪ್ಸನ್ 23 ಇಂಡಿ 02 : ತಾಲೂಕಿನ  ಇಂಗಳಗಿ ಎಲ್‌ಟಿ-2 ಗ್ರಾಮದ  ಎಲ್‌ಪಿಎಸ್ ಶಾಲೆಯ   ನೂತನ ಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಎಇಇ ದಯಾನಂದ ಮಠ ಮಾತನಾಡಿದರು. 


ಸುದ್ದಿ ಓದಿ