ಕಾಗವಾಡ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಗುದ್ದಲಿ ಪೂಜೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಗುದ್ದಲಿ ಪೂಜೆ

ಕಾಗವಾಡ 13: ಕಾಗವಾಡ-ಜಮಖಂಡಿ ರಾಜ್ಯ ಹೆದ್ದಾರಿ ಮಾರ್ಗದ ಉಗಾರ-ಕುಡಚಿ ಮಧ್ಯದಲ್ಲಿಯ ರಸ್ತೆ ಅಭಿವೃದ್ಧಿಗೊಳಿಸಲು ರಾಜ್ಯದ ಸರಕಾರದ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 1.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. 

ಶನಿವಾರರಂದು ಉಗಾರದಲ್ಲಿ ಪುರಸಭೆ ಸದಸ್ಯರು ರಸ್ತೆ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ಸಲ್ಲಿಸಿದರು. 

ಕಳೆದ ಅನೇಕ ದಿನಗಳಿಂದ ಈ ಮಾರ್ಗದ ರಸ್ತೆ ಅಭಿವೃದ್ಧಿಗೊಳಿಸುವ ಬೇಡಿಕೆಯಾಗಿತ್ತು. ಇದನ್ನು ಗಮನದಲ್ಲಿ ತೆಗೆದುಕೊಂಡು ಶಾಸಕ ಶ್ರೀಮಂತ ಪಾಟೀಲರು ಅನುದಾನ ಮಂಜೂರುಗೊಳಿಸಿ ಚಾಲನೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಕೆಲ ಸೂಚನೆಗಳು ನೀಡಿದರು. 

ಲೊಕೋಪಯೋಗಿ ಇಲಾಖೆಯ ಅಭಿಯಂತರಾದ ಆರ್‌.ಪಿ.ಅವತಾಡೆ ಶಾಸಕರಿಗೆ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು. ಗುತ್ತಿಗೆದಾರ ರಾಜು ಅಲಬಾಳೆ ಇವರು ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. 

ಉಗಾರ ಪುರಸಭೆ ಸದಸ್ಯರಾದ ಪ್ರಫೂಲ ಥೋರುಶೆ, ಸುಜಯ ಫರಾಕಟ್ಟೆ, ಪ್ರಕಾಶ ಥೋರುಶೆ, ಅಶೋಕ ಕಾಂಬಳೆ, ಯೊಗೇಶ ಕುಂಬಾರ, ಬಾಬು ಹೊಸಮನಿ, ರಾಕೇಶ ಪಾಟೀಲ, ರವಿ ರಾಜಮಾನೆ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ