ಶಾಲಾ ಕೊಠಡಿಗಳ ಕಾಮಗಾರಿಗೆ ಅಕಿವಾಟೆ ಪೂಜೆ
ಕಾಗವಾಡ 10: ಶಿರಗುಪ್ಪಿ ಗ್ರಾಮದ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರೌಢ ಶಾಲಾ ಕೊಣೆ ಕಟ್ಟಡಗಳಿಗೆ 31 ಲಕ್ಷ ರೂ. ಅನುದಾನದ ಕಾಮಗಾರಿಗೆ ಸಚಿವರ ಅನುಪಸ್ಥಿತಿಯಲ್ಲಿ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬುಧವಾರರಂದು ಶಿರಗುಪ್ಪಿ ಗ್ರಾಮದಲ್ಲಿ ಶಾಲಾ ಕೋಣೆಗಳ ಕಟ್ಟಡ ಕಾಮಗಾರಿಗೆ ಪೂಜೆ ಸಲ್ಲಿಸಿ ಅಭಯಕುಮಾರ ಅಕಿವಾಟೆ ಅವರು ಮಾತನಾಡುವಾಗ, ಕಾಗವಾಡ ಕ್ಷೇತ್ರ ಶಾಸಕರು ಹಾಗೂ ಜವಳಿ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ ಇವರ ಅನುದಾನದಿಂದ 31 ಲಕ್ಷ ಅನುದಾನ ಮಂಜೂರುಗೊಂಡಿದ್ದು, ಈ ಅನುದಾನ ಬಳಿಸಿ 2 ಶಾಲಾ ಕೋಣೆ ಕಟ್ಟಡಗಳು ನಿರ್ಮಿಸಲಾಗುತ್ತಿದೆ. ಸಚಿವರು ಈಗಾಗಲೇ ಶಿರಗುಪ್ಪಿ ಗ್ರಾಮದ ಅಭಿವೃದ್ಧಿಗಾಗಿ ಕೋಟಿ ರೂ.ರಷ್ಟು ಅನುದಾನ ನೀಡಿದ್ದಾರೆ. ಇದರ ಸದ್ಬಳಿಕೆ ಮಾಡಿ ಗುಣಮಟ್ಟದ ಕಾಮಗಾರಿಗಳು ಕೈಗೊಳ್ಳುತ್ತೇವೆಯೆಂದರು.
ಗ್ರಾಮದ ಮುಖಂಡರಾದ ಶಿವಾನಂದ ಪಾಟೀಲ, ದೀಪಕ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾಂಜಲಿ ಚೌಗುಲೆ, ಉಪಾಧ್ಯಕ್ಷ ಮನೋಜ ವಡ್ಡರ, ಜಿಲ್ಲಾ ಪಂಚಾಯತ್ ಅಭಿಯಂತರಾದ ಎ.ಬಿ.ಮೇತ್ರೆ, ಸೊಮೇಶ ಪಾಟೀಲ, ರಾಮಗೌಡ ಪಾಟೀಲ, ಭಮ್ಮಣ್ಣ ಚೌಗುಲೆ, ಮಹಾವೀರ ಕಾತ್ರಾಳೆ, ಪಂಡಿತ ವಡ್ಡರ, ಸುಭಾಷ ಮೋನೆ, ಲಕ್ಷ್ಮಣ ವಡ್ಡರ, ಸಮುಖ್ಯೋಪಾದ್ಯಾಯರಾದ ಉಜ್ವಲಾ ಮಗದುಮ್, ಸೇರಿದಂತೆ ಅನೇಕರು ಇದ್ದರು.
ಸಚಿವರ ಆಪ್ತ ಸಹಾಯಕ ವಿನಾಯಕ ಶಿಂಧೆ ಹಾಗೂ ಇತರ ಗಣ್ಯರನ್ನು ಸನ್ಮಾನಿಸಿದರು.
ಫೋಟೊ ಶೀರ್ಷಿಕೆ: 10 ಕಾಗವಾಡ 2