ಲಲಿತಾ ಸಹಸ್ರನಾಮ ಪಾರಾಯಣ ಸಾಂಗತಾ ಕಾರ್ಯಕ್ರಮ
ಧಾರವಾಡ 09: ಹೊಸಯಲ್ಲಾಪೂರದ ತಾರಕೇಶ್ವರ ಭಜನಾ ಮಂಡಳಿ ಸದಸ್ಯರೆಲ್ಲರೂ ಸೇರಿ ಪ್ರತಿನಿತ್ಯ ಲಲಿತಾ ಸಹಸ್ರನಾಮ ಪಾರಾಯಣವನ್ನು ಶಶಿಕಾಂತ ಗುರೂಜೀ ಇವರಿಂದ ಅಧ್ಯಯನ ಮಾಡಿ ಲಲಿತಾ ಸಹಸ್ರನಾಮ ಪಾರಾಯಣ ಸಾಂಗತಾ ಕಾರ್ಯಕ್ರಮವನ್ನು ಡಿ.ಸತ್ಯನಾರಾಯಣಾಚಾರ್ಯ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಅದರಂತೆ ಶಶಿಕಾಂತ ಗುರೂಜೀ ಅವರಿಗೆ ಗುರುದಕ್ಷಿಣೆ ಕೊಟ್ಟು ಸನ್ಮಾನಿಸಲಾಯಿತು. ಮಂಡಳಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.