ಸಂಭ್ರಮದ ಲಕ್ಷ್ಮೀ ರಂಗನಾಥ ರಥೋತ್ಸವ
ಗುಳೇದಗುಡ್ಡ 03:ಗುಳೇಗುಡ್ಡ ತಾಲೂಕಿನ ಗ್ರಾಮಗಳ ಪೈಕಿ ಕೆಲವಡಿ ಗ್ರಾಮದ ಪ್ರಸಿದ್ಧ ಲಕ್ಷ್ಮೀ ರಂಗನಾಥ ರಥೋತ್ಸವ ಶನಿವಾರ ಸಾಯಂಕಾಲ ಜರುಗಿತು.
ಫೂಜಾ ವಿಧಿವಿಧಾನಗಳು ದೇವಸ್ಥಾನದಲ್ಲಿ ಬೆಳಗಿನಿಂದ ಆರಂಭವಾಗಿದ್ದವು.ಗೋಪಾಳ ತುಂಬಿಸುವುದು, ಕಳಸದ ಮೆರವಣಿಗೆ, ರಂಗನಾಥ ದೇವರ ಪಾದಗಟ್ಟಿಗೆ ಹೋಗಿ ಪೂಜೆ ಮಾಡಲಾಯಿತು. ದೇವಸ್ಥಾನದ ಒಳಗಡೆ ಪಲ್ಲಕ್ಕಿ ಸೇವೆ ಮಾಡಲಾಯಿತು. ವಿವಿಧ ವಾಧ್ಯ ಮೇಳಗಳೊಂದಿಗೆ ಕಳಸದ ಮೆರವಣಿಗೆ ಜರುಗಿತು.
ಸಾಯಂಕಾಲ ರಥೋತ್ಸವದ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಸಾಕಷ್ಟು ಬಂದೋಬಸ್ತ್ ಮಾಡಿದ್ದರೂ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾತ್ರಾ ರಥೋತ್ಸವದ ಸಂದರ್ಭದಲ್ಲಿ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ಸಂಭ್ರಮಿಸಿದರು.