25 ವರ್ಷಗಳ ಅಂಗನವಾಡಿ ಸೇವೆಗೆ ಲಕ್ಷ್ಮೀ ಪಾಟೀಲರಿಗೆ ಸನ್ಮಾನ
ನೇಸರಗಿ 13 : ಸರಕಾರಿ ಸೇವೆಯಲ್ಲಿರುವವರು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆಗೈದಾಗ ಅವರ ಸೇವೆ ಸಾರ್ಥಕ ಎಂದು ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಹೇಳಿದರು. ಅವರು ಸಮೀಪದ ದೇಶನೂರ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಲಕ್ಷ್ಮಿ ಪಾಟೀಲ ನಿವೃತ್ತಗೊಂಡ ಪ್ರಯುಕ್ತ ಸನ್ಮಾನಿಸಿ ಮಾತನಾಡಿ, ದೇಶನೂರ ಗ್ರಾಮದ ಕೋಡ್ 125 ದೇಶನೂರ ಇಲ್ಲಿ ಸತತ 25 ವರ್ಷ್ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸೇವೆ ಅಪಾರವಾಗಿದೆ. ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಉಮಾ ಮಡಿವಾಳರ, ಸಹಾಯಕಿ ಲಕ್ಷ್ಮಿ ಗುಡ್ದಾಕರ, ಗ್ರಾಮಸ್ಥರು ಉಪಸ್ಥಿತರಿದ್ದರು.