ಅಥಣಿ

ಲಕ್ಷ್ಮೀದೇವಿ ದೇವಸ್ಥಾನದ ಕಳಸದ ಮೆರವಣಿಗೆ

ಲಕ್ಷ್ಮೀದೇವಿ ದೇವಸ್ಥಾನದ ಕಳಸದ ಮೆರವಣಿಗೆ
ಬಾಸಿಂಗಿ ತೋಟದ ಲಕ್ಷ್ಮೀದೇವಿ ದೇವಸ್ಥಾನದ ಕಳಸದ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು

ಅಥಣಿ 19: ಬಾಸಿಂಗಿ ತೋಟದ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಮತ್ತು ಕಳಸಾರೋಹಣ ಕಾರ್ಯಕ್ರಮದ ದೇವಸ್ಥಾನದ ಕಳಸದ ಮೆರವಣಿಗೆ ಕಾರ್ಯಕ್ರಮವನ್ನು ಸುಮಂಗಲೆಯರಿಂದ ಕುಂಭ ಮೇಳದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.

ಸಂಕೋನಟ್ಟಿ ಮಾಜಿ ಗ್ರಾ.ಪಂ ಅಧ್ಯಕ್ಷ ಅರುಣ ಭಾಸಿಂಗಿ ಮಾತನಾಡಿ ಈ ನಮ್ಮ ಬಾಸಿಂಗಿ ತೋಟದಲ್ಲಿ ಹಲವಾರು ವರ್ಷಗಳಿಂದ ಲಕ್ಷ್ಮೀದೇವಿ ನೆಲೆಸಿದ್ದು ಹತ್ತು ಹಲವಾರು ವಿಸ್ಮಯ ಹಾಗೂ ಪವಾಡಗಳ ಮೂಲಕ ಮನೆ ಮಾತಾಗಿದ್ದಾರೆ. ಇಲ್ಲಿರುವ ಸುಮಾರು ಕುಟುಂಬಗಳ ಆರಾಧ್ಯ ದೈವವಾದ ಈ ದೇವಿಯ ದೇವಸ್ಥಾನದ ಕಳಸದ ಮೆರವಣಿಗೆ ಇವತ್ತು ನೆರವೇರಿದ್ದು ನಾಳೆ ಕಳಸಾರೋಹಣ ಕಾರ್ಯಕ್ರಮ ಸ್ಥಳೀಯ ಭಕ್ತರ ಸಹಕಾರದಿಂದ ಕೋವಿಡ್ ನಿಯಮಾವಳಿ ಅನುಸರಿಸಿ ನಡೆಯಲಿದ್ದು ಭಕ್ತರು ಸಹಕರಿಸಿ ಎಂದು ವಿನಂತಿ ಮಾಡಿಕೊಂಡರು.

ಅನಂತರ ಕುಂಭಮೇಳ ಹೊತ್ತ ಸುಮಂಗಲೆಯರಿಗೆ ದೇವಸ್ಥಾನ ಕಮೀಟಿ ವತಿಯಿಂದ ಉಡಿ ತುಂಬುವ ಕಾರ್ಯ ನಡೆಯಿತು. 

ಶಿವಾಜಿ ಭಾಸಿಂಗಿ, ಸಿದರಾಯ ಭಾಸಿಂಗಿ, ಹಣಮಂತ ಬಾಸಿಂಗಿ, ಪರಸು ಭಾಸಿಂಗಿ, ಶಿವು ಬಾಸಿಂಗಿ, ಕುಮಾರ ನರೋಡೆ, ಮಾದೇವ ನರೋಡೆ, ಅಂಬಣ್ಣ ದೇವಕಾತೆ, ರಾಜು ಬಾಸಿಂಗಿ, ಮುರುಗೇಶ ತೇರದಾಳ, ಶಿವಪ್ಪ ಹಲವೆಗಾರ, ಅಕ್ಷಯ ಬಾಸಿಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ