ರಸ್ತೆ ಕಾಮಗಾರಿಗೆ ಲಕ್ಷ್ಮಣ ಸವದಿ ಭೂಮಿ ಪೂಜೆ
ಲೋಕದರ್ಶನ ವರದಿ
ಅಥಣಿ 27: ಅಥಣಿ ಮತಕ್ಷೇತ್ರದ ತಂಗಡಿ ರಸ್ತೆಯಿಂದ ಮುರಗುಂಡಿ ಗ್ರಾಮದ ಲೋಕುರೆ ತೋಟದ ವರೆಗಿನ ಸಂಪರ್ಕ ರಸ್ತೆಯಿಂದ ಮುರಗುಂಡಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಮಾಜಿ ಡಿಸಿಎಸ್ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಮುರಗುಂಡಿ ಗ್ರಾಮದಲ್ಲಿ 223 ಲಕ್ಷ ರೂ.ಗಳ ಅನುದಾನದಲ್ಲಿ 4.5 ಕಿಮಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಂಪರ್ಕ ರಸ್ತೆ, ಮುಖ್ಯ ರಸ್ತೆಗಳ ನಿರ್ಮಾಣಕ್ಕಾಗಿ ಸಿಎಮ್ ಬೊಮ್ಮಾಯಿ ನೇತೃತ್ವದ ಸರಕಾರ ಅಥಣಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಈ ಅನುದಾನದಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ತಂಗಡಿ ರಸ್ತೆಯಿಂದ ಲೋಕುರೆ ತೋಟದ ರಸ್ತೆಯಿಂದ ರೈತರು ತಮ್ಮ ತೋಟದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ನಗರ, ಪಟ್ಟಣ ಪ್ರದೇಶಗಳಿಗೆ ಸುಲಭವಾಗಿ ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರಿಂದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಎಲ್ಲವೂ ಕೂಡ ರಾಷ್ಟ್ರೀಯ ಅಧ್ಯಕ್ಷರು ನಿರ್ಧರಿಸುತ್ತಾರೆ ಹೀಗಾಗಿ ಸಂಪುಟ ವಿಸ್ತರಣೆ ಸಂಬಂಧ ನಮಗ್ಯಾರಿಗೂ ಮಾಹಿತಿ ಇರುವುದಿಲ್ಲ ಎಂದ ಅವರು ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷದ ಮೇಲೆ ಆರೋಪಿಸುವುದು ನಾವು ಕಾಂಗ್ರೆಸ್ ಪಕ್ಷದ ಮೇಲೆ ಆರೋಪಿಸುವುದು ಸರಿಯಲ್ಲ. ಅಕ್ರಮ ಮಾಡಿರುವವರು ಯಾರೇ ಆಗಿರಲಿ ಯಾವುದೇ ಪಕ್ಷದವರಿರಲಿ ಅವರು ಅಪರಾಧಿಗಳೆ ಎಂದ ಅವರು ಎಲ್ಲರೂ ಸೇರಿ ಅಪರಾಧಿಗಳನ್ನು ಮಟ್ಟ ಹಾಕೋಣ ಎಂದು ಸಲಹೆ ನೀಡಿದರು.
ಮಾಜಿ ಜಿ.ಪಂ ಸದಸ್ಯ ವಿನಾಯಕ ಬಾಗಡಿ ಮಾತನಾಡಿದರು. ನೀರಾವರಿ ಇಲಾಖೆಯ ಕೆ.ರವಿ, ಪ್ರವೀಣ ಹುಣಶಿಕಟ್ಟಿ, ಮುರಗುಂಡಿ ಗ್ರಾಮದ ಮುರುಘೇಶ ಕನಕರೆಡ್ಡಿ, ಕುಮಾರ ಪಾಟೀಲ, ಸುನೀಲ ಪವಾರ, ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ಬಸವರಾಜ ಪಾಟೀಲ, ಭೀಮು ಸಡ್ಡಿ, ಮುರಗೆಪ್ಪಾ ಮಗಾಡಿ, ತವನಪ್ಪಾ ಮಹೇಶವಾಡಗಿ, ಪಿಡಿಒ ಎಸ್.ಎಸ್.ಸನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.