ಕಾಗವಾಡ

ಮಂಗಸೂಳಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಮಂಗಸೂಳಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಲೋಕದರ್ಶನ ವರದಿ 


ಕಾಗವಾಡ 16: ತಾಲೂಕಿನ ಸುಕ್ಷೇತ್ರ ಮಂಗಸೂಳಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬುಧವಾರ ಸಿ.17ರಂದು ಸಾಯಂಕಾಲ  ಕಾರ್ತಿಕ ಮಾಸದ ನಿಮಿತ್ಯ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. 

  ದಿವ್ಯ ಸಾನಿದ್ಯವನ್ನು ಬೆಳ್ಳಂಕಿ ಹಿರೇಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು  ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ವಹಿಸಲಿದ್ದಾರೆ. ಉದ್ಘಾಟನೆಯನ್ನು ಮುಜರಾಯಿ, ಹಜ್ ಹಾಗೂ ವಕ್ಫ್‌ ಖಾತೆಯ ಸಚಿವೆ ಶಶಿಕಲಾ ಜೊಲ್ಲೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಬ ಜೊಲ್ಲೆ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಕುಡಚಿ ಶಾಸಕ ಪಿ.ರಾಜೀವ, ಆಗಮಿಸಲಿದ್ದಾರೆ ಎಂದು ಸಂಘಟಕ ಚಿದಾನಂದ ಮಾಳಿ ತಿಳಿಸಿದರು. 

  ಪ್ರಮುಖ ಉಪಸ್ಥಿತಿ ಗ್ರಾಮದ ಪೊಲೀಸಪಾಟೀಲ ಅಭಯಸಿಂಹ ಪಾಟೀಲ, ಮಾಜಿ ಜಿ.ಪಂ ಸದಸ್ಯ  ಅಜೀತ ಚೌಗುಲೆ, ಮಾಜಿ ತಾ.ಪಂ ಸದಸ್ಯರಾದ ಸಂಭಾಜಿ ಪಾಟೀಲ, ಸುಧಾಕರ ಭಗತ, ಗ್ರಾಮ ಪಂಚಾಯತ್, ಅಧ್ಯಕ್ಷೆ ಸರೀತಾ ಪಾಟೀಲ, ಉಪಾಧ್ಯಕ್ಷೆ  ಭಾರತಿ ಭಗತ್ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗ್ರಾಮದ ಸರ್ವ ಧರ್ಮಿರ ಸದ್ಬಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಚಿದಾನಂದ ಮಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ