ಲೇಬರ್ ಸಮಸ್ಯೆ ಅರ್ಧಕ್ಕೆ ನಿಲ್ಲಿಸಿ ರಸ್ತೆ ಕಾಮಗಾರಿ: ರೈತರಿಗೆ ತೊಂದರೆ
ಇಂಡಿ: ತಾಲ್ಲೂಕಿನ ಅಜರ್ುಣಗಿ ಬಿ.ಕೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ನಾದ ರಸ್ತೆಯಿಂದ ರುಕ್ಮಿಣಿ ಮಾಣಕರ ಅವರ ಹೊಲಕ್ಕೆ ಹೋಗುವ ರಸ್ತೆಗೆ ಪಂಚಾಯತ್ನ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಡಿ ನಿಮರ್ಾಣಕ್ಕಾಗಿ 1.5 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿದ್ದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಆ ರಸ್ತೆಯ ಮುಖಾಂತರ ಹೊಲಗಳಿಗೆ ಹೋಗುವ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.
ಕಳೆದ ನಾಲ್ಕು ತಿಂಗಳಿನಿಂದ ಕಾಮಗಾರಿ ಸ್ಥಗಿತವಾಗಿದ್ದು ಕೇವಲ ಎರಡು ಪೈಪ್ಗಳನ್ನು ಅಳವಡಿಸಿ ರಸ್ತೆಯ ಮೇಲೆ ಟ್ರ್ಯಾಕ್ಟರ್ ಮೂಲಕ ಗರಸು ಹಾಕಿದ್ದು ಗರಸಿನ ಡಿಬ್ಬ ರಸ್ತೆಯ ಮಧ್ಯಭಾಗದಲ್ಲೇ ಬಿದ್ದಿದ್ದರಿಂದ ರೈತರು ಅಡ್ಡಾಡಲು ತೀವ್ರ ತೊಂದರೆಯಾಗುತ್ತಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಕಾಮಗಾರಿ ಮುಗಿಸಿ ರೈತರಿಗೆ ಅನುವು ಮಾಡಿಕೊಡುವರೇ ಕಾದು ನೋಡಬೇಕು.
ಬಾಕ್ಸ-
ಕಳೆದ ನಾಲ್ಕಾರು ವರ್ಷಗಳಿಂದ ಸಿಡಿ ನಿಮರ್ಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ರೈತರ ಜಮೀನುಗಳಿಗೆ ಹೋಗಲು ಕಷ್ಟವಾಗುತ್ತಿದೆ. ಪಂಚಾಯತ್ ಅಧಿಕಾರಿಗಳಿಗೆ ಹೇಳಿದರೆ ಸದಸ್ಯರು ಮಾಡಿಸುತ್ತಾರೆ ಎನ್ನುತ್ತಾರೆ. ಸದಸ್ಯರಿಗೆ ಕೇಳಿದರೆ ಪಿಡಿಓ ಮಾಡಿಸುತ್ತಾರೆ ಎನ್ನುತ್ತಾರೆ. ಈ ಸಮಸ್ತೆ ಬಗೆಹರಿಸಿ ರೈತರಿಗೆ ಅನುವು ಮಾಡಿಕೊಡಬೇಕು.
-ಜ್ಯೋತಿಬಾ ಮೋಟೆ. ಅಜರ್ುಣಗಿ ಬಿ.ಕೆ. ಗ್ರಾಮಸ್ಥ.
ಬಾಕ್ಸ-
ಲೇಬರ್ ಸಮಸ್ಯೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನೆರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಪ್ರಭಾವತಿ ಕುಂಬಾರ ಪಿಡಿಓ ಅಜರ್ುಣಗಿ ಬಿ.ಕೆ.
2 ಇಂಡಿ 1ಎ, ಬಿ:
ಇಂಡಿ: ನಾದ ರಸ್ತೆಯಿಂದ ರುಕ್ಮಿಣಿ ಮಾಣಕರ ಅವರ ಹೊಲಕ್ಕೆ ಹೋಗುವ ರಸ್ತೆಗೆ ಸಿಡಿ ನಿಮರ್ಾಣ ಕಾಮಗಾರಿ ಕೈಗೊಂಡಿದ್ದು ರಸ್ತೆಯ ಮೇಲೆಯೇ ಗರಸು ಹಾಕಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ಅಡ್ಡಾಡಲು ಸಾಧ್ಯವಾಗುತ್ತಿಲ್ಲ