ಕುಮಾರೇಶ್ವರ ವಿರಾಟಪುರ ವಿರಾಗಿ ಜೀವನ ಆಧಾರಿತ ಚಲನಚಿತ್ರ ಪ್ರಚಾರದ ರಥಯಾತ್ರೆ ಸಭೆ
ಇಂಡಿ: ಸಮಾಜ ನಿರ್ಮಾಣದ ರೂವಾರಿಗಳು, ಸರ್ವರಿಗೂ ಶಿಕ್ಷಣ, ಅಂಧರ ಬಾಳಿಗೆ ಸಂಗೀತ ಶಿಕ್ಷಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಫಾಪನೆ, ಶಿವಯೋಗ ಮಂದಿರ ಸ್ಥಾಪನೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದವರು ಹಾನಗಲ್ಲದ ಕುಮಾರೇಶ್ವರರು ಎಂದು ಖೇಡಗಿಯ ವಿರಕ್ತಿಮಠದ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರಾ್ಯಲಯದಲ್ಲಿ ನಡೆದ ಕುಮಾರೇಶ್ವರ ವಿರಾಟಪುರ ವಿರಾಗಿ ಜೀವನ ಆಧಾರಿತ ಚಲನಚಿತ್ರ ಪ್ರಚಾರದ ರಥಯಾತ್ರೆ ಸಭೆಯಲ್ಲಿ ಅವರು ಮಾತನಾಡಿದರು.
ನಿವೃತ್ ಪ್ರಾಚಾರ್ಯ ಎ.ಎಸ್. ಘಾಣಿಗೇರ ಮಾತನಾಡಿ, ಕುಮಾರ ಶಿವಯೋಗಿಗಳ ಪೂರ್ವಾಶ್ರಮದ ಬದುಕು ಹಾಗು ಸಾಧನೆಯ ಬದುಕು ಕುರಿತು ಉಪನ್ಯಾಸ ನೀಡಿ, ಒಬ್ಬ ಮನುಷ್ಯ ತನ್ನ ಜೀವಿತಾಧಿಯಲ್ಲಿ ಏನೇನು ಮಾಡಲು ಅಸಾಧ್ಯವೋ ಅದೆನ್ನೇಲ್ಲಾ ಸಾಧ್ಯ ಮಾಡಿ ತೋರಿಸಿದವರು ಹಾನಗಲ್ಲದ ಕುಮಾರ ಶಿವಯೋಗಿಗಳು ಎಂದರು.
ಸಂಶೋಧಕ ಡಾ. ಎಸ್.ಕೆ. ಕೊಪ್ಪಾ ಮಾತನಾಡಿ, ವೀರಶೈವಕ್ಕೊಂದು ಇತಿಹಾಸವಿದೆ. ಅಧ್ಯಯನವಿಲ್ಲ, ಅದರದೇ ಆದ ಸಂಹಿತೆ ಇದೆ. ವ್ಯವಸ್ಥೆ ಇಲ್ಲ. ಸಂಸ್ಕೃತಿ ಇದೆ. ಸಂವಹನ ಸಾಧ್ಯತೆಯ ಸೌಲಭ್ಯಗಳು ಸಾಕಷ್ಠಿಲ್ಲ. ದರ್ಶನವಿದೆ ಮಾರ್ಗದರ್ಶನವಿಲ್ಲ. ಪರಂಪರೆ ಇದೆ. ಪರಿಣಾಮವಿಲ್ಲ. ಅನುಭಾವವಿದೆ ಅನುಷ್ಠಾನವಿಲ್ಲ. ಸಿದ್ಧಾಂತವಿದೆ ಸಾಧನೆ- ಸಿದ್ಧಿಗಳಿಲ್ಲ. ಸಮಾಜ ಇದೆ. ಸಂಘಟನೆ ಇಲ್ಲ. ಈ ಎಲ್ಲಾ ಅಸಾಧ್ಯಗಳನ್ನು ಸಾಧ್ಯವಾಗಿಸಲು ಸಮಾಜಕ್ಕೆ ಸಂಜೀವಿನಿಯಾಗಿ ಬಂದವರು ಹಾನಗಲ್ಲದ ಕುಮಾರೇಶ್ವರರು ಎಂದರು.
ರಾಜ್ಯ ವೀರಶೈವ ಲಿಂಗಾಯತ ಘಟಕದ ಕಾರ್ಯದರ್ಶಿ ಬಸವರಾಜ ಸಾಹುಕಾರ ಕುಮಸಗಿ ಮಾತನಾಡಿ, ಸಮಾಜದ ಕಣ್ಣೀರನ್ನು ಒರಸಿ ಸದೃಡ ಸಮಾಜವನ್ನು ನಿರಿ್ಮಸಲು ತಮ್ಮ ಜೀವನವನ್ನೇ ಶ್ರೀಗಂಧದಂತೆ ತೇಯ್ದ ಸುಗಂಧ ಬೀರಿದವರು ಎಂದರು.
ಸಾನಿಧ್ಯ ವಹಿಸಿದ ಅಭಿನವ ಮುರುಗೇಂದ್ರ ಶಿವಾಚಾರ್ಯರರು, ಹಿಂಚಗೇರಿಯ ಶಂಭುಲಿಂಗ ಶಿವಾಚಾರ್ಯರರು, ಇಂಡಿಯ ಓಂಕಾರ ಆಶ್ರಮದ ಸ್ವರೂಪಾನಂದ ಶ್ರೀಗಳು, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಯೋಗಗುರು ಬಿ.ಎಸ್. ಪಾಟೀಲ, ಪ್ರಭುಲಿಂಗ ಕತ್ತಿ ಮಾತನಾಡಿದರು.
ವೇದಿಕೆಯ ಮೇಲೆ ಶಂಕರಗೌಡ ಪಾಟೀಲ ಡೊಮನಾಳ, ಚನ್ನುಗೌಡ ಪಾಟೀಲ ರೋಡಗಿ, ಮಲ್ಲನಗೌಡ ಪಾಟೀಲ, ಅರವಿಂದ ಘಾಳಿಮಠ, ಆರ್.ವಿ. ಪಾಟೀಲ, ರವೀಂದ್ರ ನಿಗಡಿ, ಮಲ್ಲಿಕಾರ್ಜುನ ದೇವರ, ಈರಣ್ಣ ಬುರಕುಲೆ ಸೇರಿದಂತೆ ಅನೇಕರು ಇದ್ದರು.
ಇದಕ್ಕು ಮೊದಲು ರಥಯಾತ್ರೆಗೆ ವಿಜಯಪುರ ರಸ್ತೆಯ ಸರಕಾರಿ ಆಸ್ಪತ್ರೆಯ ಹತ್ತಿರ ಭವ್ಯ ಸ್ವಾಗತ ಮಾಡಲಾಯಿತು. ನಂತರ ಕುಂಬ ಹೊತ್ತ ಮಹಿಳೆಯರಿಂದ ಶಾಂತೇಶ್ವರ ಮಂಗಲ ಕಾರಾ್ಯಲಯದ ವರೆಗೆ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮೆರವಣೆಗೆ ನಡೆಯಿತು. ದಾರಿ ಉದ್ದಕ್ಕೂ ಮಹಿಳೆಯರು ನೀರು ಹಾಕಿ ಪೂಜೆ ಸಲ್ಲಿಸಿ ಭಕ್ತಿ ಪ್ರದರ್ಶಿಸಿದರು.