ಗರ್ವಿತ್ ರೋಶನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಶಾಲೆಗೆ ಕೀರ್ತಿ
ಗರ್ವಿತ್ ರೋಶನ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಶಾಲೆಗೆ ಕೀರ್ತಿ
ಧಾರವಾಡ 08: ಅನುವ್ರತ ವಿಶ್ವ ಭಾರತಿ ಸೊಸೈಟಿಯವರು ನಡೆಸಿದ “ಅನುವ್ರತ ಕ್ರಿಯೇಟಿವಿಟಿ ಕಾಂಟೆಸ್ಟ್” ಎಂಬ ಭಾಷಣ ಸ್ಪರ್ಧೆಯಲ್ಲಿ ಜೆ.ಎಸ್.ಎಸ್. ಮಂಜುನಾಥೇಶ್ವರ ಶಾಲೆಯ 8ನೇ ತರಗತಿಯ ಕುಮಾರ. ಗರ್ವಿತ್ ರೋಶನ್ ಎಂಬ ವಿದ್ಯಾರ್ಥಿಯು ರಾಜ್ಯ ಮಟ್ಟದಲ್ಲಿ ಪ್ರಥಮ ಹಾಗೂ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾನೆ. ಈ ಸಾಧನೆಗೆ ಜೆ.ಎಸ್.ಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಜೆ.ಎಸ್.ಎಸ್. ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಹಾಗೂ ಶಾಲೆಯ ಪ್ರಾಚಾರ್ಯೆ ಸಾಧನಾ. ಎಸ್. ಇವರು ವಿದ್ಯಾರ್ಥಿ ಹಾಗೂ ಪಾಲಕರನ್ನು ಅಭಿನಂದಿಸಿದ್ದಾರೆೆ.