ರಾಣೆಬೆನ್ನೂರ

ಕೂಡ್ಲಿ ಆರ್ಯ ಆಕ್ಷೊಭ್ಯತೀರ್ಥರ ಚಾತುರ್ಮಾಸ್ಯದ ಉಪನ್ಯಾಸ ಮಾಲಿಕೆ-2

ಕೂಡ್ಲಿ ಆರ್ಯ ಆಕ್ಷೊಭ್ಯತೀರ್ಥರ ಚಾತುರ್ಮಾಸ್ಯದ ಉಪನ್ಯಾಸ ಮಾಲಿಕೆ-2

ರಾಣೇಬೆನ್ನೂರ 01: ನಗರದಕೋಟೆ ಭಾಗದಲ್ಲಿ ಶ್ರೀವಿದ್ಯಾಧೀಶತೀರ್ಥರ ಹಾಗೂ ಶ್ರೀಸತ್ಯಾಭಿಜ್ಞತೀರ್ಥರ ಮೂಲವೃಂದಾವನ  ಸನ್ನಿಧಾನದಲ್ಲಿ ಕೂಡ್ಲಿ ಆರ್ಯಅಕ್ಷೊಭ್ಯ ಮಠಾಧೀಶ ಶ್ರೀ ರಘುವಿಜಯತೀರ್ಥರ 22ನೇ ಚಾರ್ತುಮಾಸ್ಯದ  ನಿಮಿತ್ತ ಎರಡನೇ ದಿನದ ಉಪನ್ಯಾಸ ಮಾಲಿಕೆಯಲ್ಲಿ ಭಗವದ್ಗಿತೆಯಲ್ಲಿ ಬರುವ ಭಗವಂತನ ಉಪದೇಶ ಕುರಿತು ಮಾತನಾಡಿದ ಶ್ರೀಗಳು ಭಗವದ್ಗಿತೆಯೂ ಸರ್ವ ಸಾಮಾನ್ಯವಾಗಿದ್ದು ಆಧ್ಯಾತ್ಮಿಕಗ್ರಂಥವಾಗಿದೆ.  

ಪಾಂಡವಕೌರವರ ಮಧ್ಯ ಭಗವಂತನ ಸಂಕಲ್ಪದಂತೆ ಸಂಧಾನವು ವಿಫಲವಾಗಿ ಯುದ್ದ ನಿಶ್ಚಯವಾಯಿತು.  ಕೌರವರ ಹನ್ನೊಂದು ಅಕ್ಷೊಹಿಣಿ ಸೈನ್ಯ ಪಾಂಡವರ ಏಳು ಅಕ್ಷೊಹಿಣಿ ಸೈನ್ಯಗಳು ಕುರುಕ್ಷೇತ್ರದಲ್ಲಿ ಸೆಣಸಾಡಲು ನಿಂತಿರುವ ಸಂದರ್ಭ, ಯುದ್ಧೋತ್ಸಾಹದಲ್ಲಿ ಅನೇಕ ಸಂಖ್ಯಾತವಾದ ರಣವಾದ್ಯಗಳು ಮೊಳಗುತ್ತಿದ್ದವು. ನೆರೆದ ಎಲ್ಲ ಯೋಧರ ಮನಸ್ಸಿನಲ್ಲಿ ಮರಣದ ಕಳವಳ ತುಂಬಿದೆ.  

ಈ ಸಂದರ್ಭದಲ್ಲಿ ಕೃಷ್ಣ ಸಾರಥಿಯಾದ ಅರ್ಜುನನು ಯುದ್ಧ ಭೂಮಿಯನ್ನು ಪ್ರವೇಶಿಸಿ ಎರಡೂ ಸೈನ್ಯಗಳ ಮೇಲೆ ದೃಷ್ಟಿಯನ್ನು ಹಾಯಿಸುತ್ತಾನೆ.  ಆಗ ಎರಡು ಸೈನ್ಯಗಳಲ್ಲಿ ಸೇರಿರುವ ಬಾಲ್ಹೀಕನೇ ಮೊದಲಾದ ಪ್ರಪಿತಾಮಹರು ಭೀಷ್ಮ, ಭೂರಿಶ್ರವ, ಭೂರಿ, ಶಲ್ಯ, ಮುಂತಾದವರು ಪಿತಾಮಹರು ಸೋದರ ಮಾವನಾದ ಶಲ್ಯ, ಕೌರವರೆಂಬ ಸಹೋದರರು ಇತ್ಯಾದಿ ಬಂಧುಗಳನ್ನು ಸಂಹಾರ ಮಾಡುವ ಪ್ರಸಂಗ ಬಂದಿರುವ ಈ ಯುದ್ಧವು ಎಂದುಕೊಂಡು ಇಂಥಾ ಬಂಧು ಬಾಂಧವರ ಸಂಹಾರವನ್ನು ಮಾಡಬೇಕಾದ ಪ್ರಸಂಗ ಪ್ರಾಪ್ತವಾಯಿತಲ್ಲಾ ಎಂದು ಕಸವಿಸಿಗೊಂಡವನಾಗಿ ತನ್ನ ಮನದ ಅಳಲನ್ನು ಶ್ರೀಕೃಷ್ಣನ ಮುಂದೆತೋಡಿಕೊಂಡನು. ಗುರುಗಳಾದ ಭೀಷ್ಮಾದಿ ಹಿರಿಯರುದ್ರೋಣಾಚಾರ್ಯರಂಥ ಗುರುಗಳನ್ನು ಮತ್ತು ಅನೇಕ ಬಂಧಗಳನ್ನು ಸಂಹಾರ ಮಾಡಿ ಅವರರಕ್ತದಿಂದತೊಯ್ದ ಭೂಮಿಯನ್ನು ನಾವು ಪಾಂಡವರು ಆಳಬೇಕೇ? ಯುದ್ದವೆಂದ ಮೇಲೆ ಸಾವು ಬದುಕುಗಳು ಅನಿಶ್ಚಿತ ನಮ್ಮನ್ನು ಶತೃಗಳು ಕೊಂದರೆ ಜೀವನವೇ ಮುಗಿದು ಸುಖ ಪಡೆಯುವ ಅವಕಾಶವೇ ಇರುವುದಿಲ್ಲಾ ನಾವು ಕೌರವರನ್ನು ಭೀಷ್ಮಾಧಿಗಳನ್ನು ಸಂಹಾರಮಾಡಿದಾಗ ರಾಜ್ಯವೇನು ಸಿಗಬಹುದು.  ಆದರೆ ನಿತ್ಯದಲ್ಲಿಯೂ ಕೂಡಾ ಬಂಧುಗಳ ಸಂಹಾರದಿಂದ ನಮಗೆ ಈ ರಾಜ್ಯ ಭೋಗ ಸಿಕ್ಕಿದ್ದು ಎಂಬ ಸ್ಮರಣೆ  ಬರಲೇಬೇಕು.   

ಭೋಗಮಾಡಿ ಸುಖಪಡುವ ಅವಕಾಶವೂ ಕೂಡಾ ಇರುವುದಿಲ್ಲಾ ಹೀಗಾಗಿ ಹೇ ಕೃಷ್ಣ ನನಗೆ ಈ ಯುದ್ಧವು ಬೇಡ ನಾನು ಎಲ್ಲಾದರೂ ಭಿಕ್ಷಾಟನೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತೇನೆ ಎಂದು ಬಂಧುಗಳ ಮೇಲಿನ ಮೋಹದಿಂದ ಕ್ಷತ್ರಿಯನಾದ ಅರ್ಜುನ ತನ್ನ ಕರ್ತವ್ಯವಾದ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಎಂಬ ಕಾರ್ಯವನ್ನು ಮರೆತು ಬಿಲ್ಲು ಬಾಣಗಳನ್ನು ರಥದಲ್ಲಿ ಚೆಲ್ಲಿ ನಿರಾಶನಾಗಿ ಹತಾಶನಾಗಿ ಕುಳಿತುಕೊಂಡಾಗ ಅವನ ಈ ಅನಾವಶ್ಯಕ ಬಂಧು ಮೋಹವನ್ನು ಕಿತ್ತು ಹಾಕಿ ಕರ್ತವ್ಯದ ಕಡೆಗೆ ಮುಖ ಮಾಡಿಸುವ ಶ್ರೀಕೃಷ್ಣನ ಮಾತುಗಳೇ ಭಗವದ್ಗೀತೆ ಎಂದು ಕರೆಯಲ್ಪಡುತ್ತದೆ. ಶ್ರೀ ಕೃಷ್ಣಾರ್ಜುನರ ಯುದ್ಧ ಭೂಮಿಯಲ್ಲಾದ ಸಂವಾದವನ್ನು ಶ್ರೀ ಮಾಹಾಭಾರತ ನಿರ್ಮಾಣದ ಕಾರಣರಾದ ವೇದವ್ಯಾಸದೇವರು ಭೀಷ್ಮ ಪರ್ವದಲ್ಲಿ 18ನೇಯ ಅಧ್ಯಾಯಗಳ ರೂಪದಲ್ಲಿ ನಿರೂಪಿಸಿದ್ದಾರೆ. 


ಸುದ್ದಿ ಓದಿ