ಕಾಗವಾಡ

ಕುಡಚಿ ಸೇತುವೆ ಸಂಪೂರ್ಣ ಜಲಾವೃತ

ಕುಡಚಿ ಸೇತುವೆ ಸಂಪೂರ್ಣ ಜಲಾವೃತ

ಕಾಗವಾಡ,23 : ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿಯೂ ಸಹ ಮಳೆ ನಿರಂತರವಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುಡಚಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ. 

ಜಮಖಂಡಿ ಹಾಗೂ ಉಗಾರ್ ನಡುವೆ ಸಂಪರ್ಕ್‌ ಕಲ್ಪಿಸುವ ಕುಡಚಿ ಸೇತುವೆ ಜಲಾವೃತಗೊಂಡ ಹಿನ್ನಲಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ತಡರಾತ್ರಿಯೇ ರಸ್ತೆ ಸಂಚಾರ ಬಂದ್ ಮಾಡಿದ್ದ  ಕಾಗವಾಡ ಪೊಲೀಸ ಠಾಣೆ ಸಿಬ್ಬಂದಿ ಸೂಕ್ತರ ಕ್ರಮ ಕೈಗೊಂಡಿದ್ದು, ಸಂಚಾರ ನಿಷೇಧಿಸಿ, ಫಲಕ ಅಳವಡಿಸಿದ್ದಾರೆ. ಈ ಸಮಯದಲ್ಲಿ ಪಿಎಸ್‌ಐ ಎಂ.ಬಿ. ಬಿರಾದಾರ, ಸಿಬ್ಬಂದಿಗಳಾದ ಯಲ್ಲಾಲಿಂಗ ಲಾಳಿ, ಸುರೇಶ ನಂದೆವಾಲೆ,  ಸೇರಿದಂತೆ ಪೋಲಿಸರು ಉಪಸ್ಥಿತರಿದ್ದರು. 


ಸುದ್ದಿ ಓದಿ