ಕ್ಷತ್ರೀಯರು ಸಮರ್ಥ ಆಡಳಿತಗಾರರು: ಟಿ.ಎಮ್. ಮೇಹರವಾಡೆ
ಶಿಗ್ಗಾವಿ 05: ಕ್ಷತ್ರೀಯರು ಸಮರ್ಥ ಆಡಳಿತಗಾರರು, ದೇಶ ಪ್ರೇಮಿಗಳು, ದೇಶದ ಪ್ರಜ್ಞಾವಂತ ಪ್ರಜೆಗಳು ಹಾಗೂ ಸಮಾಜ ಸೇವೆಯಲ್ಲಿ ಸದಾ ಮುಂದಾಗಿರುವವರು ಎಂದು ಅಖಿಲ ಭಾರತ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಖಜಾಂಚಿ ಟಿ.ಎಮ್. ಮೇಹರವಾಡೆ ಹೇಳಿದರು.
ಪಟ್ಟಣದ ಜಯನಗರದ ಆನಂದ ದಾನಿ ಬಡಾವಣೆಯಲ್ಲಿ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಜಯಂತಿಯ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಎಸ್.ಎಸ್.ಕೆ ಸಮಾಜದ ಸಂಘಟನೆ ಆಗಬೇಕು ನಂತರ ಸಮಾಜ ಬೆಳೆಸಲು ನಾವು ನೀವೇಲ್ಲ ಒಟ್ಟಾಗಿ ಶ್ರಮೀಸಿ ನವ ಪೀಳಿಗೆಯಲ್ಲಿ ನವ ವಿಚಾರಗಳನ್ನು ತಂದು ಸಮಾಜವನ್ನು ಜಾಗೃತಗೋಳಿಸೋಣ ಎಂದರು.
ತಾಲೂಕ ಅಧ್ಯಕ್ಷ ಆನಂದಸಾ ದಾನಿ ಮಾತನಾಡಿ ನಮ್ಮದು ಸಣ್ಣ ಸಮಾಜ ಆದರೂ ಸಹಿತ ತಾಲೂಕಿನಲ್ಲಿ ಎಸ್.ಎಸ್.ಕೆ ಸಮಾಜ ಸಂಘಟನೆ ಮಾಡಿ ಸಮುದಾಯ ಭವನ ನಿರ್ಮಿಸೋಣ ಹಾಗೂ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನಾವು ನೀವೇಲ್ಲ ಪ್ರೇರೇಪಿಸೋಣ ಮತ್ತು ಸಮಾಜ ಮುಖ್ಯವಾಹಿನಿಗೆ ತರಲು ಶ್ರಮಿಸೋಣ ಎಂದರು.
ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮೋಹನ ಎಸ್ ಬದ್ದಿ, ಸುಭಾಸ ಆರ್ ಕಾಟೇಗಾರ, ಸೂರ್ಯಕಾಂತ ವಾಯ್. ಕಾಟೇಗಾರ, ನಾಗೇಂದರಸಾ ಕಾಟೇಗಾರ, ಕೃಷ್ಣಾ ಎನ್ ಬೇವಿನಕಟ್ಟಿ, ಗುರುರಾಜ ರಾಜೋಳ್ಳಿ, ರಮೇಶ ಎಲ್ ಕಾಟೇಗಾರ, ಮನೋಹರ ಅರವಟಗಿ, ನಾಗರಾಜ ವಿ ದಾನಿ, ಚಂದ್ರಕಾಂತ ವಾಯ್ ಕಾಟೇಗಾರ ಸೇರಿದಂತೆ ಶಿಗ್ಗಾವಿ, ಸವಣೂರ, ಹುಲಗೂರ, ತಡಸದ ಸಮಸ್ತ ಸೋಮವಂಶ ಕ್ಷತ್ರೀಯ ಕುಲಬಾಂಧವರು ಉಪಸ್ಥಿತರಿದ್ದರು.
ರೂಪಾ ಕಾಟೇಗಾರ ಸ್ವಾಗತಿಸಿದರು, ರೇಖಾ ದಾನಿ ವಂದಿಸಿದರು, ಡಾಽಽ ರೇಣುಕಾ ಮೇತ್ರಾಣಿ ಕಾರ್ಯಕ್ರಮ ನಿರ್ವಹಿಸಿದರು.