ರಾಣೆಬೆನ್ನೂರ

ಶ್ರೀ ಸತ್ಯಾಭಿಜ್ಞರ ಮಠದಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ

ಶ್ರೀ ಸತ್ಯಾಭಿಜ್ಞರ ಮಠದಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ

ರಾಣಿಬೆನ್ನೂರು 28: ನಗರದ ಕೋಟೆಯ ಶ್ರೀ ಸತ್ಯಾಭಿಜ್ಞರ ಮಠದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಸೋಮವಾರ ಕೂಡಲಿಯ ಅಕ್ಷೊಭ್ಯತೀರ್ಥ ಮಠದ ಶ್ರೀ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

22ನೇಯ ಚಾತುರ್ಯಮಾಸದ ನಿಮಿತ್ತ ಶ್ರೀಗಳಿಂದ ವೈಕುಂಟ ರಾಮದೇವರ ಪೂಜೆ  ಕೃಷ್ಣದೇವರ ಪೂಜೆ ತೊಟ್ಟಲು ಹಾಕುವುದು ಹಾಗೂ ರಾತ್ರಿ ಅರ್ಘ್ಯ ಬಿಡುಸುವ ಕಾರ್ಯಕ್ರಮವು ನಡೆಯಿತು. ಚಿಕ್ಕಮಕ್ಕಳಿಂದ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ಮತ್ತು ಗ್ರಾಮ ಪ್ರದಕ್ಷಣೆ ನಡೆಯಿತು. ಅಲ್ಲದೆ ಯುವಕರಿಂದ ಗೋಪಾಲ (ಕಾವಲಿ) ಗಡಿಗೆ ಒಡಿಯುವ ಮೂಲಕ ಸಂಭ್ರಮಿಸಿದರು. ಒಬ್ಬೊರಿಗೊಬ್ಬರು ಬಣ್ಣಹಚ್ಚುವುದು, ಓಕಳಿ ಆಡುವ ಮೂಲಕ ಗೋಕಲಷ್ಟಮಿಯ ಹಬ್ಬದ ಆಚರಣೆಯನ್ನು ವಿಶೇಷವಾಗಿ ಆಚರಿಸಿದರು. 

ಈ ಸಂದರ್ಭದಲ್ಲಿ ಜಯತೀರ್ಥಚಾರ ಪಾಂಡುರಂಗಿ, ರಂಗವಿಠಲಾಚಾರ್ಯ ಚೆಂದಿ, ರಂಗನಾಥ ದೇಶಪಾಂಡೆ, ಪಾಚಿಡಣ್ಣ ರಾಯಚೂರ, ಗೋವಿಂದ ಚಿಮ್ಮಲಗಿ, ಧೀರೇಂದ್ರ ಪಂಚಬಾವಿ, ವಾದಿರಾಜ ಗಲಗಲಿ, ಜಯರಾಮ ಮಠದ, ಸುಜೇಯ ಚೆಂದಿ, ರಂಗವಿಠಲ ಚೆಂದಿ,  ಆದಿತ್ಯ ಕುಲ್ಕರ್ಣಿ, ನರಸಿಂಹ ಚೆಂದಿ, ಸಂಜೀವ ಪಾಂಡುರಂಗಿ, ಪ್ರಮೋದಿ ಚಿಮ್ಮಲಗಿ, ವಾದಿರಾಜ ಶಿರಹಟ್ಟಿ, ಶ್ರೀನಿಧಿ, ಕವೀಂದ್ರ ಸಂಜೀವ ಶಿರಹಟ್ಟಿ  ಮುಂತಾದವರು ಇದ್ದರು. 


ಸುದ್ದಿ ಓದಿ