ಕಾಗವಾಡ

ಮಹಾ ಮಳೆಗೆ ಕೃಷ್ಣಾ ನದಿಗೆ ಮತ್ತೆ ಮಹಾಪೂರ ಸಾಧ್ಯತೆ : ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಕಾಗವಾಡದ ನೋಡಲ್ ಅಧಿಕಾರಿ ಎಲ್‌.ವೈ.ರೋಡಗಿ ಸೂಚನೆ

ಮಹಾ ಮಳೆಗೆ ಕೃಷ್ಣಾ ನದಿಗೆ ಮತ್ತೆ ಮಹಾಪೂರ ಸಾಧ್ಯತೆ : ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಕಾಗವಾಡದ ನೋಡಲ್ ಅಧಿಕಾರಿ ಎಲ್‌.ವೈ.ರೋಡಗಿ ಸೂಚನೆ

ಲೋಕದರ್ಶನ ವರದಿ 


ಕಾಗವಾಡ 07: ಮಹಾರಾಷ್ಟ್ರದ ಸೈಯಾದ್ರಿ ಶ್ರೀನಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿಗೆ ಮತ್ತೆ ಮಹಾಪೂರ ಉಂಟಾಗುವ  ಸಾಧ್ಯತೆಯಿದೆ. ಇದನ್ನು ಅಂದಾಜಿಸಿ ಕಾಗವಾಡ ತಾಲೂಕಿನ 11 ಗ್ರಾಮಗಳ ಜನ-ಜಾನುವಾರುಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲದ್ದಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಎಲ್ಲರೂ ಕಟ್ಟುನಿಟ್ಟಿನ ಎಚ್ಚರಿಕೆ ಪಾಲಿಸಬೇಕೆಂದು ಕಾಗವಾಡದ ನೋಡಲ್ ಅಧಿಕಾರಿಗಳು ಚಿಕ್ಕೋಡಿಯ ಕೃಷಿ ನಿರ್ದೇಶಕ ಎಲ್‌.ವೈ.ರೋಡಗಿ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಕೆ ನೀಡಿದರು. 

ಗುರುವಾರ ಸಂಜೆ ಕಾಗವಾಡದ ಪ್ರವಾಸಿ ಮಂದಿರದಲ್ಲಿ ತಾಲೂಕ ಅಧಿಕಾರಿಗಳ ವಿಶೇಷ ಸಭೆ ಹಮ್ಮಿಕೊಳ್ಳಲಾಗಿತ್ತು. ತಹಶೀಲ್ದಾರ್ ರಾಜೇಶ್ ಬುರ್ಲಿ ಇವರ ನೇತೃತ್ವದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಎಲ್‌.ವೈ.ರೋಡಗಿ ಮಾತನಾಡುವಾಗ ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಈ ಮೊದಲು ಕೃಷ್ಣಾ ನದಿಯ ಮಹಾಪೂರ ಅನುಭವಿಸಿದ್ದೀರಿ. 11 ಗ್ರಾಮಗಳಲ್ಲಿ 8  ಗ್ರಾಮಗಳು ಸಂಪೂರ್ಣ ಬಾಧಿತವಾಗಿವೆ. ಅಲ್ಲಿಗೆ ಇರುವ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಎಲ್ಲ ನೋಡಲಾಧಿಕಾರಿಗಳು, ಆರೋಗ್ಯ ಅಧಿಕಾರಿ, ಸೇರಿದಂತೆ ಪ್ರತಿಯೊಬ್ಬರು ನಿಗಾ ವಹಿಸಿ ಯಾವುದೇ ಮನುಷ್ಯ ಹಾಗೂ ಜನಜಾನುವಾರುಗಳಿಗೆ ಜೀವಕ್ಕೆ ಹಾನಿ ಆಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ನಿರ್ಲಕ್ಷತೆ ವಹಿಸುವವರ ಮೇಲೆ ಕ್ರಮ ಜರುಗಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು. 

ಕಾಗವಾಡ ತಹಶೀಲ್ದಾರ್ ರಾಜೇಶ್ ಬುರ್ಲಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅವರ ಜವಾಬ್ದಾರಿಗಳನ್ನು ನೆನಪಿಸಿ ನದಿ ನೀರಿನ ಬಾಹಿತ ಆಗುವ ಗ್ರಾಮಗಳಲ್ಲಿ ದೋಣಿಗಳು, ರೇಷನ್ ಪಡಿತರ ಧಾನ್ಯ ಮುಟ್ಟಿಸಲಾಗಿದೆ ಎಂದು ಹೇಳಿ ನದಿಗೆ ನೀರು ಹೆಚ್ಚಿಸುವ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡಲೇಬೇಕು, ಗಂಜಿ ಕೇಂದ್ರಗಳು ಪ್ರಾರಂಭಿಸುವುದು ಬಗ್ಗೆ  ಮಾಹಿತಿ ನೀಡಿದರು 

ಸಭೆಯಲ್ಲಿ ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಬಿಇಒ ಎಂ.ಆರ್‌.ಮುಂಜೆ, ಸಿ.ಡಿ.ಪಿ.ಓ ಸಂಜಯ್‌ಕುಮಾರ್ ಸದಲಗೆ, ಜೀಪಂ ಅಭಿಯಂತ ವೀರಣ್ಣ ವಾಲಿ, ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಮುನಿಸಿಕಟ್ಟಿ, ಸೇರಿದಂತೆ ಇನ್ನುಳಿದ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ