ಗುಳೇಗುಡ್ಡ

ಗ್ರಾಮಸ್ಥರ ಸಹಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯ

ಗ್ರಾಮಸ್ಥರ ಸಹಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯ

ತಹಶೀಲ್ದಾರ ಜಿ.ಎಮ್.ಕುಲಕಣರ್ಿ ಅಭಿಮತ| ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ  

ಗುಳೇದಗುಡ್ಡ 03: ಕೋವಿಡ್ ಸೋಂಕು ನಿಯಂತ್ರಣಕ್ಕೆ ಜನರ ಸಹಕಾರವೂ ಅಗತ್ಯವಾಗಿದೆ. ಎರಡನೆಯ ಅಲೆಯ ಸೋಂಕು  ಗ್ರಾಮೀಣ ಭಾಗದಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣವಾಗಿದೆ. ಅದರ ನಿಯಂತ್ರಣಕ್ಕೆ ಗ್ರಾಮೀಣ ಜನರ ಸಹಕಾರವೂ ಅಗತ್ಯವಾಗಿದೆ ಎಂದು ತಹಶೀಲ್ದಾರ ಜಿ.ಎಮ್.ಕುಲಕಣರ್ಿ ಹೇಳಿದರು.

 ಗುರುವಾರ ಆರೋಗ್ಯ, ಕಂದಾಯ, ತಾಲೂಕು ಪಂಚಾಯತಿ ಇಲಾಖೆಗಳ ಆಶ್ರಯದಲ್ಲಿ ತಾಲೂಕಿನ ಹುಲ್ಲಿಕೇರಿ.ಎಸ್.ಪಿ ಹಾಗೂ ಹುಲ್ಲಿಕೇರಿ.ಎಲ್.ಟಿ. ಗ್ರಾಮಗಳಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,  ಗ್ರಾಮಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದಕ್ಕೆ ಭಯಪಡದೆ ಎಚ್ಚರಿಕೆಯಿಂದ ಇದ್ದು, ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು  ಸರ್ಕರದ ನಿಯಮಗಳನ್ನು ಪಾಲಿಸಬೇಕು.ಸಕರ್ಾರ ಗ್ರಾಮೀಣ ಪ್ರದೇಶದಲ್ಲಿ ಸೋಂಕು ತಡೆಗಟ್ಟಲು, ವೈದ್ಯರು ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ಅವರು ಹಾಗೂ ಅವರ ಸಿಬ್ಬಂದಿ ಆರೋಗ್ಯ ತಪಾಸನೆ ಮಾಡಿ ಲಸಿಕೆ ಹಾಕುತ್ತಾರೆ. ಅದಕ್ಕೆ ತಮ್ಮ ಸಹಕಾರ ಅಗತ್ಯವಿದೆ. ಪ್ರತಿ ಗ್ರಾಮಗಳ ಪಂಚಾಯತ್ ಸದಸ್ಯರು ಮುಂದೆ ಬಂದು ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದರು. 

    ಗುರುವಾರ ಹುಲ್ಲಿಕೇರಿ.ಎಸ್.ಪಿ, ಹುಲ್ಲಿಕೇರಿ.ಎಲ್.ಟಿ, ಕಟಗೇರಿ, ಹಾಗೂ ಆಸಂಗಿ ಗ್ರಾಮಗಳಲ್ಲಿ ತಪಾಸನೆ ಹಾಗೂ ಲಸಿಕೆ ಹಾಕುವ ಕಾರ್ಯ ಜರುಗುತ್ತಿವೆ ಎಂದು ತಹಸೀಲ್ದಾರ ಜಿ.ಎಂ.ಕುಲಕಣರ್ಿ ಸಭೆಗೆ ತಿಳಿಸಿದರು.  ಸಭೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುಳಾ ಮಾದರ, ಸದಸ್ಯ ಗಾಯತ್ರಿ ಶಿವಪ್ಪ ಗೊರವರ್, ಪಿಡಿಓ ಶಿವಕುಮಾರ ರಾಜನಾಳ ಇದ್ದರು.

   ಕಾರ್ಯಕ್ರಮದ ನಂತರ, ತೋಗುಣಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕತರ್ೆಯರು ಮನೆ, ಮನೆಗೆ ತೆರಳಿ ಕುಟುಂಬಗಳ  ಸದಸ್ಯರ ಆರೋಗ್ಯ ತಪಾಸಣೆಕೈಗೊಂಡರು. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಲಾಯಿತು. 

   ಜಾಥಾ: ಬೆಳಿಗ್ಗೆ ಗ್ರಾಮದಲ್ಲಿ ಕೊರೊನಾ ಜಾಗೃತಿ ಜಾಥಾ ನಡೆಯಿತು. ವೈದ್ಯರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು ಹಾಗೂ ಕುಮಾರೇಶ್ವರ ಮೆಡಿಕಲ್ ಕಾಲೇಜ ವಿದ್ಯಾಥರ್ಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಡಿಓ ಪಾಲ್ಗೊಂಡಿದ್ದರು 

ಸುದ್ದಿ ಓದಿ