ತಾಲೂಕಿನ ನಾಲ್ಕು ಕಡೆ ಅ.28ಕ್ಕೆ ಕೋಟಿಕಂಠಗಾಯನ
ಶಿಗ್ಗಾವಿ 22: ಸರ್ಕಾರದ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ನಿರ್ದೇಶನದ ಮೆರೆಗೆ ಪಟ್ಟಣದ ತಹಸಿಲ್ದಾರ ಕಛೇರಿ, ತಾಲೂಕಿನ ಗೊಟಗೋಡಿ ಗ್ರಾಮದ ರಾಕ್ಗಾರ್ಡನ, ಬಾಡ ಮತ್ತು ಶಿಶುವಿನಾಳ ಈ ನಾಲ್ಕೂ ಕಡೆಗಳಲ್ಲಿ ಅ.28ಕ್ಕೆ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯವಾಗೀಗೀತೆಗಳಾದ“ಜಯ ಭಾರತ ಜನನಿಯತನುಜಾತೆರಚನೆ ಕುವೆಂಪು, ಉದಯವಾಗಲಿ ನಮ್ಮ ಚಲುವ ಕನ್ನಡ ನಾಡುರಚನೆಹುಯಿಲುಗೋಳ ನಾರಾಯಣರಾಯರು, ಬಾರಿಸು ಕನ್ನಡ ಡಿಂಡಿಮವರ ಚನೆಶ್ರೀ ಕುವೆಂಪು, ಹಚ್ಚೇವು ಕನ್ನಡದ ದೀಪ ರಚನೆ ಡಾ.ಡಿ.ಎಸ್.ಕರ್ಕಿ, ವಿಶ್ವ ವಿನೂತನ ವಿದ್ಯಾಚೇತನರ ಚನೆಚನ್ನವೀರಕಣವಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುರಚನೆ ಹಂಸಲೇಖ” ಈ ಆರು ಹಾಡುಗಳನ್ನು ಹಾಡಲಾಗುತ್ತದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಯಾಗಿ, “ನನ್ನ ನಾಡು ನನ್ನ ಹಾಡು ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ’ ಭಾಗವಹಿಸಿ, ಕನ್ನಡ ನಾಡು ನುಡಿಯ ಶ್ರೇಷ್ಟತೆಯನ್ನು ಎತ್ತಿ ಹಿಡಿಯಬೇಕೆಂದು ತಾಲೂಕಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಬಿ.ಅಂಬಿಗೇರ ಕನ್ನಡಿಗರಿಗೆ ಮನವಿ ಮಾಡಿಕೊಂಡಿದ್ದಾರೆ.