ಕಾಗವಾಡ

ಕೋಟಿ ಕಂಠ ಗಾಯನ ಯಶಸ್ವಿ

ಕೋಟಿ ಕಂಠ ಗಾಯನ ಯಶಸ್ವಿ

ಶೇಡಬಾಳ 28: ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯ ಹಾಗೂ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೋಟಿ ಕಂಠ ಗಾಯನ ಯಶಸ್ವಿಯಾಗಿ ಸಂಪನ್ನಗೊಂಡಿತು. 

ಶುಕ್ರವಾರ ದಿ. 28 ರಂದು ಸನ್ಮತಿ ಸಹಕಾರಿ ಸಮಿತಿಯ ಶಾಲೆಗಳಲ್ಲಿ  67 ನೇ  ಕರ್ನಾಟಕ ರಾಜೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶದಂತೆ ಅ.28 ರಂದು ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಕೋಟಿ ಕಂಠ ಗಾಯನ ಅನ್ನುವ ಕಾರ್ಯಕ್ರಮಕ್ಕೆ ಆದೇಶಿಸಲಾಗಿತ್ತು. ಅದರಂತೆ ಪಟ್ಟಣದ ಸನ್ಮತಿ ವಿದ್ಯಾಲಯ ಹಾಗೂ ಸನ್ಮತಿ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಕೋಟಿ ಕಂಠ ಗಾಯನ ನಡೆಸಲಾಯಿತು. 

 ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಸುಶ್ರಾವ್ಯ ಕಂಠದಿಂದ ಕುವೆಂಪು ಅವರು ರಚಿಸಿರುವ ನಾಡಗೀತೆ ಬಾರಿಸು ಕನ್ನಡ ಡಿಂಡಿಂವ, ಹೂಯಿಲಗೋಳ ನಾರಾಯಣರಾವ ಅವರ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಡಿ.ಎಸ್‌. ಕರ್ಕಿ ಅವರ ಹಚ್ಚೆವು ಕನ್ನಡದ ದೀಪ, ಕಣವಿಯವರ ವಿಶ್ವ ವಿನೂತನ ವಿದ್ಯಾಚೇತನ, ಹಂಸಲೇಖಾ ಅವರ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಕನ್ನಡ ಗೀತೆಗಳನ್ನು ಹಾಡಿ ಕೋಟಿ ಕಂಠ ಗಾಯನವನ್ನು ಯಶಸ್ವಿಗೊಳಿಸಿದರು.  

ಸನ್ಮತಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಾಹುಬಲಿ ಬಣಜವಾಡ, ಸನ್ಮತಿ ವಿದ್ಯಾಲಯದ ಮುಖ್ಯಾದ್ಯಾಪಕಿ ಎಂ.ಎನ್‌.ಕಾಳೆಕಟ್ಟಿ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ