ಇಂಡಿ

ಅ.28ರಂದು ಕೋಟಿ ಕಂಠ ಗೀತಗಾಯನ ಅಭಿಯಾನ

ಅ.28ರಂದು ಕೋಟಿ ಕಂಠ ಗೀತಗಾಯನ ಅಭಿಯಾನ

ಇಂಡಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗೀತಗಾಯನ ಅಭಿಯಾನವನ್ನು ಸರಕಾರ ರೂಪಿಸಲಾಗಿದ್ದು ಅ.28 ರಂದು ಬೆಳಗ್ಗೆ 11 ಕ್ಕೆ ನಗರದ ಕ್ರೀಡಾಂಗಣದಲ್ಲಿ ಅಭಿಯಾನ ಆಯೋಜಿಸಲಾಗಿದೆ. ಕಾರ‌್ಯಕ್ರಮ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಹಸೀಲ್ದಾರ ನಾಗಯ್ಯ ಹಿರೇಮಠ ತಿಳಿಸಿದ್ದಾರೆ. 

ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕೋಟಿ ಕಂಠ ಗಾಯನ ಅಭಿಯಾನಕ್ಕೆ ತಾಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಜನರು ಅಭಿಯಾನದಲ್ಲಿ ಭಾಗವಹಿಸಬೇಕು. ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಾರ‌್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದ್ದಾರೆ.  

ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ ಕವಿಗಳು ರಚಿಸಿರುವ ಕವನಗಳನ್ನು ಆಲಿಸಲು ನಮ್ಮ ಅಭಿಯಾನ ಅವಕಾಶ ಕಲ್ಪಿಸುತ್ತದೆ.  

ಈ ದೃಷ್ಟಿಯಿಂದ ಈ ಗೀತೆಗಳು ಕನ್ನಡದ ಶಕ್ತಿ, ಕಳೆದ ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಾತಿನಿಧಿಕವಾಗಿ ಆಯ್ದ 3 ಕನ್ನಡ ಗೀತೆಗಳ ಸಮೂಹ ಗಾಯನವನ್ನು ವಿನೂತನವಾಗಿ ಲಕ್ಷ ಕಂಠ ಗೀತ ಗಾಯನ ಶೀರ್ಷಿಕೆಯಡಿ ರಾಜ್ಯಾದಂತ ಆಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು. 

ಕಾರ‌್ಯಕ್ರಮದಲ್ಲಿ ಭಾಗವಹಿಸುವವರಿಗೆ ಸ್ವಯಂಚಾಲಿತ ಆನ್ ಲೈನ್ ಪ್ರಮಾಣ ಪತ್ರ ನೀಡಲು ಸರಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ದಿನಾಂಕಕ್ಕಿಂತ ಮುಂಚಿತವಾಗಿ ಲಿಂಕ ಮೂಲಕ ನೊಂದಾಯಿಸಿಕೊಳ್ಳಬೇಕು ಹಾಡುಗಳ ಸಾಹಿತ್ಯ ಹಾಗೂ ದಾಟಿಯನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಯೂಟ್ಯೂಬ್ ಚಾನೆಲ್ ನಲ್ಲಿ ಅಪಲೋಡ ಮಾಡಲಾಗಿದೆ ಎಂದು ಹಿರೇಮಠ ತಿಳಿಸಿದ್ದಾರೆ.  

ಸುದ್ದಿ ಓದಿ