ಸಿರುಗುಪ್ಪ

ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕೋಟಿ ಕಂಠ ಸಮೂಹ ಗೀತ ಗಾನ

ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕೋಟಿ ಕಂಠ ಸಮೂಹ ಗೀತ ಗಾನ
ಸಿರುಗುಪ್ಪ 29-  ನಗರದ ನಗರಸಭಾ ಹತ್ತಿರದ ಆರನೇ ವಿಭಾಗ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಹಿ ಜಾಮಿಯಾ ಮಸೀದಿ ಹತ್ತಿರದ 5ನೇ ವಿಭಾಗದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಂದ  75 ನೇ ಆಜಾದಿ ಕಾ  ಅಮೃತ ಮಹೋತ್ಸವ, ಕರ್ನಾಟಕ ಸರ್ಕಾರ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಗಳ ಸಹಭಾಗಿತ್ವದಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ  ರಾಜ್ಯದಲ್ಲಿ ಕೋಟಿ ಕಂಠ ಸಮೂಹ ಗೀತ  ಅಭಿಯಾನವನ್ನು ಸರ್ಕಾರ ರೂಪಿಸಿರುವ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ವಿಶ್ವ ವಿನೂತನ ವಿದ್ಯಾ ಚೇತನ, ಸರ್ವ ಹೃದಯ ಸಂಸ್ಕಾರಿ ಬಾರಿಸು ಕನ್ನಡ ಡಿಂಡಿಮವ ಹಚ್ಚೇವು ಕನ್ನಡದ ದೀಪ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬುವ 6ಗೀತೆ ಗಾನಗಳನ್ನು  ಶಾಲಾ ಮಕ್ಕಳು ಸಮೂಹ ಧ್ವನಿ ಗೂಡಿಸುವುದರೊಂದಿಗೆ ಹಾಡಿ ರಂಜಿಸಿ ಗಮನ ಸೆಳೆದರು.
ಪ್ರತಿಜ್ಞಾ ವಿಧಿಯನ್ನು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು ಕನ್ನಡ ಶಿಕ್ಷಣ ಪ್ರೇಮಿ ಸಾಮಾಜಿಕ ಸುಧಾರಕ ಎ ಅಬ್ದುಲ್ ನಬಿ ಯವರು ಕನ್ನಡನಾಡಿನ ಪ್ರಜೆಯಾಗಿ ನಾನು ನನ್ನ ನುಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲಿ ಬರೆಯುತ್ತೇನೆ. ಕನ್ನಡವನ್ನೇ ಬಳಸುತ್ತೇನೆ ಎಂಬ  ಪಣ   ತೊಡುತ್ತೇನೆ. ಕನ್ನಡ ನಾಡು ನುಡಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿ ರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುವ ಕಲಿಸುತ್ತೇನೆ ಎಂಬ ಸಂಕಲ್ಪ ವಿಧಿ ಅಬ್ದುಲ್ ನಬಿ ಬೋಧಿಸಿದರು.
ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಷಾದ್ ಅಲಿ, ಸರ್ಕಾರಿ ಉರ್ದು ಶಾಲೆಗಳ ಮುಖ್ಯಗುರು ಗಳಾದ ಮೊಹಮ್ಮದ್ ಅಲಿ ಬಾಗವಾನ್, ತಿಮ್ಮನಗೌಡರು ಅವರು ಮಾತನಾಡಿ ಸರ್ಕಾರ ಹೊರಡಿಸಿದ ಆದೇಶದಂತೆ ನೆಲ ಜಲ ಮತ್ತು ಆಕಾಶದಲ್ಲಿ ಕನ್ನಡ ತಂಪಾದ ಧ್ವನಿ ಕೇಳಿ ಬಂದದ್ದು ನಮಗೆಲ್ಲಾ ತುಂಬಾ ಹರ್ಷವಾಗಿದೆ ಎಂದು ತಿಳಿಸಿದರು. ಶಾಲಾ  ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು .

ಸುದ್ದಿ ಓದಿ