ಕಾಗವಾಡ

ಕೋಟಿ ಕಂಠ ಗಾಯನ: ಮನಸೆಳೆದ ಕನ್ನಡ ಹಾಡುಗಳು

ಕೋಟಿ ಕಂಠ ಗಾಯನ: ಮನಸೆಳೆದ ಕನ್ನಡ ಹಾಡುಗಳು

ಕಾಗವಾಡ 29: ತಾಲೂಕಿನ ಐನಾಪುರ ಪಟ್ಟಣದ ಪ್ರತಿಷ್ಠಿತ ಕೆಆರ್ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದಡಿ ಸಂಸ್ಥೆಯ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಸಂಸ್ಥೆಯ ಮೈದಾನದಲ್ಲಿ ದಿ.28ರಂದು ಕೋಟಿ ಕಂಠ ಗಾಯನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಪ ಪ್ರಾಚಾರ್ಯ ಎ.ಎಂ.ಹುಲ್ಲೆನ್ನವರ ಬ್ರಿಟಿಷ್ ಸಕರ್ಾರದಲ್ಲಿಕರ್ನಾಟಕ ವು ಹರಿದು ಹಂಚಿ ಹೋಗಿತ್ತು. ಅದನ್ನು ಒಂದುಗೂಡಿಸುವಲ್ಲಿ ಕನ್ನಡದ ಕವಿಗಳು, ಬರಹಗಾರರು, ಮತ್ತು ಕನ್ನಡಪರ ಹೋರಾಟಗಾರರು, ಪ್ರಾದೇಶಿಕ ಭಿನ್ನತೆ ಇರುವ ಪ್ರದೇಶಗಳನ್ನು ಒಂದು ಗೂಡಿಸಿ ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದರು. ಮತ್ತು ಇಂದಿನ ಗಡಿ ಭಾಗಗಳ ಭಾಷಾ ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರ , ಕನ್ನಡಪರ ಸಂಘಟನೆಗಳು, ಸದಾ ದುಡಿಯುತ್ತಿವೆ, ಹಾಗೂ ಅದರ ಪ್ರಯುಕ್ತ ಕರ್ನಾಟಕ  ಸರ್ಕಾರ ವು ಬಹಳ ಭಿನ್ನವಾಗಿ ಕನ್ನಡ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಭಾಷೆಗೆ ಭದ್ರ ಬುನಾದಿಯನ್ನು ಹಾಕಿದೆ ಎಂದು ಹೇಳಿದರು. 

ಪ್ರಾಂಶುಪಾಲ ಬಿ ಪ್ರೇಮಾನಂದ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖೋಪಾಧ್ಯಾಯರಾದ ಎಸ್ ಎಂ ಬೆಳಕೂಡ ದೈಹಿಕ ಶಿಕ್ಷಕರಾದ ಎಸ್ ಎಸ್ ಸನದಿ, ವ್ಹಿ ಎಸ್ ಪೋತದಾರ, ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಇತರರಿದ್ದರು. ಕಾರ್ಯಕ್ರಮದಲ್ಲಿ 1000ಕ್ಕಿಂತ ಹೆಚ್ಚಿಗೆ ವಿದ್ಯಾರ್ಥಿಗಳು ಹಾಜರಾಗುವುದರ ಮೂಲಕ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು 

ಸುದ್ದಿ ಓದಿ