ರಾಣೆಬೆನ್ನೂರ

ಸ್ವಾಭಿಮಾನಿ ಬದುಕು ನಡೆಸುವಲ್ಲಿ ಕೊರಮ ಸಮಾಜ ದೊಡ್ಡದು: ಅರುಣ್ ಕುಮಾರ

ಸ್ವಾಭಿಮಾನಿ ಬದುಕು ನಡೆಸುವಲ್ಲಿ ಕೊರಮ ಸಮಾಜ ದೊಡ್ಡದು: ಅರುಣ್ ಕುಮಾರ

ರಾಣೇಬೆನ್ನೂರು 21:  ಸಣ್ಣ ಸಮಾಜವನ್ನು ಗುರುತಿಸಿ ಸರಕಾರ ಶಿವಶರಣ ನುಲಿಯ ಚಂದಯ್ಯ ಅವರ ಜಯಂತಿ ಮಾಡುತ್ತಿದ್ದೆ. ಸಣ್ಣ ಕಾಯಕ ಮಾಡಿ ದುಡಿದ ಹಣದಲ್ಲಿಯೇ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವ ಸಮಾಜವಾಗದೆ ಎಂದು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು. ನಗರದ ಶಿಕ್ಷಕರ ಭವನದಲ್ಲಿ ನಡೆದ ಕನ್ನಡ ಮತ್ತು ಸಂಸ್ಕ್ರೃತಿ ಇಲಾಖೆ ಹಾಗೂ ಕೊರಮ ಸಮಾಜ ಮತ್ತು ತಾಲ್ಲೂಕಾಡಳಿತ ಸಂಯುಕ್ತ ಆಶ್ರಯದಲ್ಲಿ ಶಿವಶರಣ ನುಲಿಯ ಚಂದಯ್ಯ 917ನೇ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ಬಸವಣ್ಣನವರ ಜೊತೆಗೆ ಶಿವಶರಣ ನುಲಿಯ ಚಂದಯ್ಯ ಕಾಯಕ ಮಾಡಿದವರು. ಬಾಳ ಕಷ್ಟದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಈಗ ಸಮಾಜದಲ್ಲಿ ಸರ್ವರಿಗೂ ಅವರ ತತ್ವ ಆದರ್ಶಗಳು ಬಹು ಮುಖ್ಯವಾಗಿವೆ. ಕೊರಮ ಸಮಾಜ ಯಾರೊಬ್ಬರನ್ನು ಬೇಡಿ ಜೀವನ ಮಾಡಿದವರಲ್ಲ ದಿನನಿತ್ಯದ ಅವರ ಕಾಯಕದ ಶ್ರಮದಿಂದ ದುಡಿಮೆ ಮಾಡಿ ಬಂದಂತ ಹಣದಲ್ಲಿಯೇ ಜೀವನ ಮಾಡುತ್ತಾ ಬಂದಿದ್ದಾರೆ. ಅವರ ಬದುಕು ಸ್ವಾಭಿಮಾನಿ ಬದುಕಾಗಿದೆ. ನಾನು ಶಾಸಕನಾಗಿದ್ದಾಗ ಕೊರಮ ಸಮಾಜಕ್ಕೆ ಸಾಮಾಜಿಕ, ಆರ್ಥಿಕ ಸಹಾಯ ಮಾಡಿದ್ದು, ಹಾಗೂ ಅವರ ಸಮಾಜದ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಾ ಬಂದಿದ್ದೆನೆ.  

ಈಗ ನಿಮ್ಮ ದೇವಾಲಯ ಕಾಮಗಾರಿ ಅಭಿವೃದ್ಧಿ ಅರ್ಧಕ್ಕೆ ನಿಂತಿದೆ. ಇದನ್ನು ಪೂರ್ಣಗೊಳಿಸಲು ನಮ್ಮ ಹಾವೇರಿ ಲೋಕಸಭಾ ಸಂಸದ  ಬಸವರಾಜ್ ಬೊಮ್ಮಾಯಿ ಅವರ ಅನುದಾನದಲ್ಲಿ 5 ಲಕ್ಷವನ್ನು ನೀಡಲಾಗುತ್ತದೆ ಎಂದು ಹೇಳಿದರು.ತಾಲೂಕ ಕೊರಮ ಸಮಾಜದ ಅಧ್ಯಕ್ಷ ಅರುಣಕುಮಾರ ಕೊರಗರ ಮಾತನಾಡಿ ಸರ್ವ ಸಮಾಜದವರು ಸಹ ಇಂತಹ ಕಾರ್ಯಕ್ರಮವನ್ನು ಮಾಡಲು ಅನುಕೂಲವಾಹಿತ್ತು. ಸಮಾಜದ ಅಭಿವೃದ್ಧಿಗೆ ಹಗಲು ಇರುಳು ಎನ್ನದೆ ದುಡಿದು ಸಮಾಜವನ್ನು ಮುಂದಕ್ಕೆ ತರುತ್ತೇನೆ. ಸಮಾಜವನ್ನು ಶಿಕ್ಷಣ ಆದ್ಯತ ನೀಡಿ. ಸಮಾಜದ ಮುಖಂಡರ ಜೊತೆಗೆ ಕೈಜೋಡಿಸಿ ಕಾರ್ಯವನ್ನು ಮಾಡಲಾಗುವುದು, ಸರ್ಕಾರದಿಂದ ಸಮಾಜಕ್ಕೆ ಬರುವ ಯೋಜನೆಗಳನ್ನು ತಾಲೂಕಿನಲ್ಲಿ ಅಧಿಕಾರಿಗಳ ಜೊತೆಗೆ ಮಾತನಾಡಿ, ಪಡೆದುಕೊಳ್ಳುವಂತ ವ್ಯವಸ್ಥೆ ಮಾಡೋಣ. ಸಮಾಜಕ್ಕೆ ಸರ್ಕಾರದಿಂದ ಸಮಾಜ ಭವನ ಮಾಡಲು ಶಾಸಕರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿ ಅದನ್ನು ಪಡೆಯುವ ವ್ಯವಸ್ಥೆ ಮಾಡುತ್ತೇವೆ ಜೊತೆಗೆ ಸಮಾಜದ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಮಾಜದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಅನಿತಾ ಭಜಂತ್ರಿ ಪ್ರಾರ್ಥಿಸಿದಳು.  

ಲಕ್ಷ್ಮಣ ಭಜಂತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ಕೊರವರ, ನಿರೂಪಿಸಿ, ವಂದಿಸಿದರು. ಕೊರಮ ಸಮಾಜದ ಅಧ್ಯಕ್ಷ  ಅರುಣಕುಮಾರ ಕೊರಗರ, ಕೆಂಚೊಡ್ಯೆಪ್ಪ ಭಜಂತ್ರಿ, ನಾಗಪ್ಪ ಪೂಜಾರ, ನಾಗರಾಜ ಕೊರಗರ, ರಮೇಶ ಹುಲಿಹಳ್ಳಿ, ನಾಗಪ್ಪ ಭಜಂತ್ರಿ ಹಾಗೂ ಸಮಾಜದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು. ಬಾಕ್ಸ್ಪೋಷಕರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡಲಿ; ಶೇಖರ್ ಭಜಂತ್ರಿ12ನೇ ಶತಮಾನದ ಶರಣಾತ ಶರಣರಲ್ಲಿ ನೂಲಿ ಚಂದಯ್ಯ ಅವರು ಒಬ್ಬರಾಗಿದ್ದರು.  

ತಳಮಟ್ಟದ ಸಮಾಜ ವಾಗಿದ್ದರೂ ಅವರ ಕಾಯಕ ಯಾವತ್ತೂ ಬಿಟ್ಟರಲಿಲ್ಲ ಇಂಥ ಕಾಯಕದಲ್ಲಿಯೇ ಅವರನ್ನು ಗುರುತಿಸಿ ಅನುಭವ ಮಂಟಪದಲ್ಲಿ ಅವರು ಒಬ್ಬ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಬಸವಣ್ಣನವರ ತತ್ವಗಳ ಆದರ್ಶವನ್ನು ಹೊಂದಿದ ನೂಲಿ ಚಂದಯ್ಯ ಅವರು ಕೊರಮ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು. ಇಂತಹ ಮಹಾನುಭವಿಗಳ ಮಹತ್ವ, ಸಂದೇಶ ತತ್ವಗಳನ್ನು ಇಂದಿನ ಯುವ ಜನತೆಗೆ ತಿಳಿಸುವ ಅವಶ್ಯಕತೆ ಇದೆ. ಸಮಾಜವನ್ನು ಮೇಲಕ್ಕೆ ತರಲು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಮಕ್ಕಳನ್ನು ಮುನ್ನಡೆಗೆ ತರಬೇಕು. 12ನೇ ಶತಮಾನದಿಂದ ಹೊಸ ಬೆಳವಣಿಗೆಯಾಗಿ ಧಾರ್ಮಿಕ ಶಿಕ್ಷಣ ವೈಚಾರಿಕ ಕ್ರಾಂತಿ ಬಂದಾಗ ಸಮಾಜದಲ್ಲಿ ಜನರಿಗೆ ಅರಿವಾಯಿತು. ಸಮಾಜದಲ್ಲಿ ಒಬ್ಬ ಮನುಷ್ಯ ಒಂದು ಭಾಗವಾಗಿ ಭಾವನೆ ಇರಬೇಕು ಅಂದಾಗ ಮಾತ್ರ ವ್ಯಕ್ತಿ ರೂಪಗೊಳ್ಳಲು ಸಾಧ್ಯವಾಗುತ್ತದೆ. ಕಾಯಕ ನಿಷ್ಠೆ, ಆತ್ಮ ಸುದ್ದಿ ಇಂದಿನ ಯುವ ಜನತೆಯಲ್ಲಿ ಮೂಡಿದಾಗ ಸಮಾಜದಲ್ಲಿ ಸುಧಾರಣೆ ಆಗಲು ಸಾಧ್ಯ. ಸಮಾಜದಲ್ಲಿ ಮನುಷ್ಯನು ಅಂತರಂಗದ ಶುದ್ಧೀಕರಣ ಮತ್ತು ಶಿಕ್ಷಣ ತತ್ವಗಳನ್ನು ಪಾಲಿಸಬೇಕು. ಸಾಮಾಜಿಕ ತಿಳುವಳಿಕೆ ಇಲ್ಲದೆ ಒಳಗಾದ ಸಮಾಜವನ್ನು ಗುರುತಿಸಿ ಎಂದು ಸ್ಥಾನಮಾನ ನೀಡಬೇಕಾಗಿದೆ ಎಂದರು. 


ಸುದ್ದಿ ಓದಿ