ರಾಣೆಬೆನ್ನೂರ

ಕೋಳಿವಾಡರವರ ಹುಟ್ಟು ಹಬ್ಬ: ಅಭಿನಂದನಾ ಸಮಾರಂಭ

ಕೋಳಿವಾಡರವರ ಹುಟ್ಟು ಹಬ್ಬ: ಅಭಿನಂದನಾ  ಸಮಾರಂಭ

ರಾಣೇಬೆನ್ನೂರು 03:  ಆಯಾ ಕ್ಷೇತ್ರದಲ್ಲಿ  ಆಡಳಿತ ನಡೆಸುವ ಪಕ್ಷದ ರಾಜಕಾರಣಿಗಳಿಗೆ, ಪಕ್ಷದ ಕಾರ್ಯಕರ್ತರು ಪ್ರಮುಖ ಬೆನ್ನೆಲುಬಾಗಿರುತ್ತಾರೆ ಅಂತಹ ಸಾವಿರಾರು ಅಪ್ಪಟ ಅಭಿಮಾನಿ  ಕಾರ್ಯಕರ್ತರ ಪೈಕಿ,  ನಗರದ ವರ್ತಕ ಕೃಷ್ಣ. ನಿಂಗಪ್ಪ. ಮಣ್ಣಣ್ಣನವರ ಅವರೊಬ್ಬರ ಜೊತೆಗೆ ಅವರ ಕುಟುಂಬ ವರ್ಗದವರು, ನಮ್ಮೊಂದಿಗಿರುವುದು, ಅತ್ಯಂತ ಸಂತೋಷವೆನಿಸುತ್ತದೆ  ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು. 

ಕೋಳಿವಾಡ ಅವರ 80ನೇ ಹುಟ್ಟು ಹಬ್ಬದ ಅಂಗವಾಗಿ, ಉಳ್ಳಾಗಡ್ಡಿ  ಮಾರುಕಟ್ಟೆಯಲ್ಲಿರುವ, ಗಣಪತಿ ಟ್ರೇಡರ್ಸ್‌ ನಲ್ಲಿ ಕೃಷ್ಣ ಮಣ್ಣಣ್ಣನವರ, ಆಯೋಜಿಸಿದ್ದ ಅಭಿನಂದನಾ  ಸಮಾರಂಭದಲ್ಲಿ, ಅಭಿಮಾನದ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ರಾಜಕೀಯ ಬರುತ್ತೆ ಹೋಗುತ್ತೆ, ಅಧಿಕಾರ ಶಾಶ್ವತವಲ್ಲ ಅಧಿಕಾರ ಇದ್ದ ಸಂದರ್ಭದಲ್ಲಿ ತಾವು ಮಾಡಿದ ಸೇವೆ ಕಾರ್ಯಗಳು ಶಾಶ್ವತವಾಗಿರುತ್ತವೆ ಎಂದ ಕೋಳಿವಾಡರು, ಇಂತಹ ಅಪ್ಪಟ ಅಭಿಮಾನಿ ಬಳಗ, ತೋರಿಸುವ ಪ್ರೀತಿ,ವಿಶ್ವಾಸ, ರಾಜಕಾರಣಿಗಳಿಗೆ ಆತ್ಮ ಸಂತೋಷ ನೀಡುತ್ತದೆ ಎಂದರು. ಸನ್ಮಾನ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಾದ, ಜೈ. ಸುರೇಶ್ ಮಣ್ಣಣ್ಣನವರ,ಕಾಂಗ್ರೆಸ್ ಪಕ್ಷದ ಮುಖಂಡರಾದ ಕೃಷ್ಣಪ್ಪ ಕಂಬಳಿ, ಏಕನಾಥ ಭಾನುವಳ್ಳಿ, ಸಣ್ಣ ತಮ್ಮಪ್ಪ ಬಾರ್ಕಿ, ಪೂರ್ಣಿಮಾ ಪ್ರಕಾಶ್ ಕೋಳಿವಾಡ, ರೇವಣಪ್ಪ ಮಣೇಗಾರ, ಕೃಷ್ಣಪ್ಪ ಇನಾಮತಿ, ಗಣೇಶ್ ವಿಭೂತಿ,ಪಾಲಾಕ್ಷಪ್ಪ,   ಸುರೇಶ್ ಜ್ಯೋತಿ ಬಣ್ಣದ, ಮುರುಗೇಶಪ್ಪ ಮಾಳೇನಹಳ್ಳಿ  ಹನುಮಂತಪ್ಪ, ಛತ್ರದರ,ರುದ್ರ​‍್ಪ, ಪೂಜಾ ಮತ್ತು ಮಮತಾ, ಸೇರಿದಂತೆ ಮತ್ತಿತರ ಗಣ್ಯರು, ವರ್ತಕರು ಪಾಲ್ಗೊಂಡಿದ್ದರು. ಹುಟ್ಟು ಹಬ್ಬದ ನಿಮಿತ್ತ ಕೃಷ್ಣ ಮಣ್ಣಣ್ಣನವರ ಅವರು, ಮಾರುಕಟ್ಟೆಯಲ್ಲಿ ನಿನ್ನೆಯ ಈರುಳ್ಳಿ ದರ ಕೆಜಿಗೆ 100 ರೂ. ಕೇವಲ.50 ರೂ ಗಳಿಗೆ ಮಾರಾಟ ಮಾಡಿ, ತಮ್ಮ ಅಪ್ಪಟ ಪ್ರೇಮವನ್ನು ಮೆರೆದು ಸಾರ್ವಜನಿಕರ ಗಮನ ಸೆಳೆದರು. 


ಸುದ್ದಿ ಓದಿ