ಕಾಗವಾಡ

ಜ್ಞಾನಗಳಿಕೆ ಜೀವನದ ಗುರಿಯಾಗಲಿ: ಕಿಲ್ಲೇದಾರ

ಜ್ಞಾನಗಳಿಕೆ ಜೀವನದ ಗುರಿಯಾಗಲಿ: ಕಿಲ್ಲೇದಾರ

ಲೋಕದರ್ಶನ ವರದಿ 

ಕಾಗವಾಡ 16: ಜ್ಞಾನಗಳಿಕೆ ನಮ್ಮ ಜೀವನದ ಗುರಿಯಾಗಬೇಕು, ವಿದ್ಯೆ ಶಾಶ್ವತವಾದುದು, ಆದ್ದರಿಂದ ಶಿಕ್ಷಣ ಮೂಲಭೂತ ಬೇಡಿಕೆಗಳನ್ನು ಪೂರೈಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕು ಎಂದು ಉಗಾರದ ಪಿಪಲ್ ಎಜ್ಯಕೇಶನ್ ಸೊಸ್ಠಟಿ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕರು ಹಾಗೂ ಉಪನ್ಯಾಸಕ ಜಿ.ಆರ್ ಕಿಲ್ಲೇದಾರ ಹೇಳಿದರು.  

ಇತ್ತೀಚೆಗೆ ಉಗಾರ ಖುರ್ದದ ಪಿಪಲ್ ಎಜ್ಯಕೇಶನ್ ಸೊಸ್ಠಟಿ ಶಿಕ್ಷಣ ಸಂಸ್ಥೆಯ ಬಿಬಿಎ ಮತ್ತು ಬಿಕಾಂ ಪ್ರಥಮ ವರ್ಷದ “ವಿದ್ಯಾರ್ಥಿಗಳಿಗೆ ಸ್ವಾಗತ ಪರಿಚಯ 2022” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಉಗಾರ ಬಿ.ಕೆ ಗ್ರಾಮದ ಜೆಎಲ್ಸಿ ಶಿಕ್ಷಣ ಸಂಸ್ಥೆಯ ಚೇರಮನ ಶೀತಲಗೌಡಾ ಪಾಟೀಲ ಮಾತನಾಡುತ್ತ ಶಿಸ್ತು ಇಂದಿನ ಯುವಕರ ಜೀವನದ ಅವಿಭಾಜ್ಯ ಅಂಗವಾಗಬೇಕು. ಶಿಸ್ತುಬದ್ಧ ವರ್ತನೆಯೆ ಜೀವನದ ಗುರಿ ಸಾದನೆಗೆ ಒಂದು ಉತ್ತಮ ಸಾಧನವಾಗಬೇಕು ಎಂದು ಹೇಳಿದರು.   

ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಚಾರ್ಯ ರಾಮಚಂದ್ರ ಕಿಲ್ಲೇದಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕೌಶಲ್ಯಕಿಂತ ಇಚ್ಛಾಶಕ್ತಿ ದೊಡ್ಡದು. ಯುವಶಕ್ತಿಗೆ ಉತ್ಸಾಹವೇ ಬಂಡವಾಳ. ಯಾಕೆಂದರೆ ನಿಸರ್ಗದತ್ತವಾದ ಅದ್ಭುತ ಚೇತನ ಶಕ್ತಿಯನ್ನು ಹೊರಗೆಳೆಯುವ ಮೂಲಕ ಭವಿಷ್ಯವನ್ನು ಪ್ರಜ್ವಲಗೊಳಿಸಿಕೊಳ್ಳಬೇಕು ಎಂದರು. 

ಸಮಾರಂಭದಲ್ಲಿ ಅತಿಥಿಗಳಾಗಿ ಸುಧಾಕರ ಚಿಟ್ನಿಸ್, ಅಶೋಕ ಶೇಡಬಾಳಕರ, ವಿನೋದ ಪಾಟೀಲ, ಬಂಡು ತಮದಡ್ಡಿ ಉಪಸ್ಥಿತರಿದ್ದರು.  

ಸಂಸ್ಥೆಯ ಖಜಾಂಚಿಗಳಾದ ಸುಭಾಷಿನಿ ವನಜೋಳ(ಕಿಲ್ಲೇದಾರ), ಉಪನ್ಯಾಸಕರಾದ ರಾಜು ಧಡಧಡೆ, ವೈಶಾಲಿ ನಿಕ್ಕಮ, ಗುರುಸಿದ್ದ ಪಾಟೀಲ, ಕಾವೇರಿ ಮಾನೆ, ಸಪನಾ ಪಾಟೀಲ, ಸುಸ್ಮೀತಾ ಭೂಸಿಂಗೆ, ಮೆಹಬೂಬ ಮೆಟಗಾರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ