ರಾಣೆಬೆನ್ನೂರ

ಕುಪ್ಪೇಲೂರಲ್ಲಿ ಜ್ಞಾನವಿಕಾಸ ಕೇಂದ್ರ, ಗ್ರಾಮಗಳ ಅಭಿವೃದ್ಧಿಗೆ ಸಮಾನತೆ ಅಗತ್ಯ: ಗಾಯಿತ್ರಿ

ಕುಪ್ಪೇಲೂರಲ್ಲಿ ಜ್ಞಾನವಿಕಾಸ ಕೇಂದ್ರ, ಗ್ರಾಮಗಳ ಅಭಿವೃದ್ಧಿಗೆ ಸಮಾನತೆ ಅಗತ್ಯ:  ಗಾಯಿತ್ರಿ

ರಾಣೇಬೆನ್ನೂರ 28: ತಾಲೂಕಿನ ಕುಪ್ಪೇಲೂರು ಕಾರ್ಯಕ್ಷೇತ್ರದಲ್ಲಿ ಇತ್ತೀಚೆಗೆ  ನೂತನ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭವು ನಡೆಯಿತು. ದೀಪ ಬೆಳಗಿಸುವುದರ ಮೂಲಕ ನೂತನ ಕೇಂದ್ರವನ್ನು ಉದ್ಘಾಟಿಸಿ ಚಾಲನೆ ನೀಡಿದ  ಗ್ರಾಮ ಪಂಚಾಯತ ಪಿಡಿಒ  ಗಾಯತ್ರಿ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯ ಬದುಕನ್ನು ಸಾಗಿಸಬೇಕಾದ ಇಂದಿನ ಅಗತ್ಯವಿದೆ, ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ತನ್ನ ಕಾರ್ಯ ನಿರ್ವಹಿಸುತ್ತಲಿದೆ ಎಂದು ಅವರು  ಗ್ರಾಮ ಪಂಚಾಯತ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.  

ತಾಲೂಕಿನ ಎಸ್‌ಕೆಡಿಆರ್‌ಡಿಪಿ  ಯೋಜನಾಧಿಕಾರಿಗಳಾದ ಮಂಜುನಾಥಗೌಡ ಅವರು ನೂತನ ಕೇಂದ್ರಕ್ಕೆ ಭುವನೇಶ್ವರಿ ಎಂದು ನಾಮಕರಣ ಮಾಡಿ, ಟ ಜ್ಞಾನ ವಿಕಾಸ ಯೋಜನಾ  ಕಾರ್ಯಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯ  ಮಾರ್ಕಂಡೇಪ್ಪಾ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ  ದುರ್ಗಾದೇವಿ ದೇವಸ್ಥಾನ ಕಮಿಟಿಯ ಅದ್ಯಕ್ಷ ಶಿವಾನಂದ, ವಲಯದ ಮೇಲ್ವಿಚಾರಕಿ  ಸವಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ, ಸೇವಾ ಪ್ರತಿನಿಧಿ  ಕೇಂದ್ರದ ಸದಸ್ಯರು ಮತ್ತಿತರರು  ಪಾಲ್ಗೊಂಡಿದ್ದರು. 


ಸುದ್ದಿ ಓದಿ