ಸಿರುಗುಪ್ಪ

ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಜ್ಞಾನ ವಿಕಸನ ಕಾರ್ಯಕ್ರಮ

ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಜ್ಞಾನ ವಿಕಸನ ಕಾರ್ಯಕ್ರಮ


ಸಿರುಗುಪ್ಪ 27: ಕಳೆದ 2ವರ್ಷಗಳಿಂದ ಕೊರೊನಾದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದ್ದು  ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವ ಮೂಲಕ ತಮ್ಮ ಜೀವನವನ್ನು ಉಜ್ವಲ ಗೊಳಿಸುವಂತೆ ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಕರೆ ನೀಡಿದರು. 

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಜ್ಞಾನ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.      

ನಿವೃತ್ತ ಪ್ರಾಚಾರ್ಯ ಬಿ ಬಸವರಾಜ ಸಹಾಯಕ ಕೃಷಿ ನಿರ್ದೇಶಕ ಎನ್ ನಜೀರ್ ಅಹ್ಮದ್,ಹಚ್ಚೊಳ್ಳಿ ಸರಕಾರಿ ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಮಹೇಶ್ ಕಾಂಚನ,ಜೀವಜಲ ಘಟಕದ ದಾನಿಗಳಾದ ಕಿರಣ್ ಕುಮಾರ್ ಜೈನ್ ಇನ್ನರ್ ವೀಲ್ ಕ್ಲಬ್ ನ ಪದಾಧಿಕಾರಿಗಳಾದ ಶ್ರೀದೇವಿ ಗಾಯತ್ರಿ ಅಶ್ವಿನಿ ಉಪನ್ಯಾಸಕರಾದ ಚಿದಾನಂದಪ್ಪ,ನಾಗರಾಜ,ದೇವರಾಜ, ಮಹಾವೀರ,ಸೋಮಶೇಖರ,ಶ್ರಾವಂತಿ, ದೀಪಾ,ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ