ಕಾನೂನುಗಳನ್ನು ಅರಿಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ : ಜೆಎಂಎಫ್ಸಿ ನ್ಯಾಯಾಧೀಶ ಚನ್ನಬಸಪ್ಪ ಕೂಡಿ
ಲೋಕದರ್ಶನ ವರದಿ
ಕಾಗವಾಡ 14: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕಾನುನೂಗಳನ್ನು ಅರಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ . ಸಜ್ಜನರ ಸಂಘ ಹೆಜ್ಜೆಯೆನು ಸವಿದಂತೆ ಎಂದು ತಿಳಿಯುತ್ತಾ ಎಲ್ಲರೂ ಸ್ವಯಂ ಪ್ರೇರಿತರಾಗಿ ಕಾನೂನು ನಿಯಮಗಳನ್ನು ಪಾಲಿಸಬೇಕೆಂದು ಕಾಗವಾಡ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಚನ್ನಬಸಪ್ಪ ಕೂಡಿ ಕರೆ ನೀಡಿದರು.
ರವಿವಾರ ದಿ. 14ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಾಗವಾಡ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಪಟ್ಟಣ ಪಂಚಾಯತ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ಯಾನ ಇಂಡಿಯಾ ಅರಿವು ಮತ್ತು ಪ್ರಚಾರದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನೇರವೆರಿತು.
ಪ್ರಸ್ತುತ ದಿನಮಾನಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಅದನ್ನು ತಡೆಗಟ್ಟಲು ಸಾರ್ವಜನಿಕ ಸಹಬಾಗಿತ್ವ ಅತ್ಯಂತ ಮಹತ್ವವಾಗಿದೆ. ಆ ನಿಟ್ಟಿನಲ್ಲಿ ಎಲ್ಲರು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಿವಿಲ್ ನ್ಯಾಯಾಲಯದಿಂದ ಶಿವಾನಂದ ಮಹಾವಿದ್ಯಾಲಯದವರೆಗೆ ಕಾನೂನು ಸಾಕ್ಷರತಾ ಜಾಥಾವನ್ನು ಏರಿ್ಡಸಿ ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಕಿರು ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಅರವಿಂದ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ರಾಜೇಶ ಬುರ್ಲಿ,ಮಾಜಿ ಶಾಸಕ ಬಿ.ಸಿ.ಸರಿಕರ, ಪ್ರಾ. ವ್ಹಿ.ಎಸ್.ತುಗಶೆಟ್ಟಿ, ಸರ್ಕಾರಿ ಅಭಿಯೋಜಕ ಎಸ್.ಎಂ.ಖೇಮಲಾಪೂರೆ, ಶಿಕ್ಷಣಾಧಿಕಾರಿ ಆರ್.ಎಂ.ಮುಂಜೆ, ತಾಲೂಕಾ ಪಂಚಾಯತ್ ಇಓ ವೀರನಗೌಡ ಏಗನಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗಿ, ಕಾಗವಾಡ ಎ.ಎಸ.ಐ ಬಸವರಾಜ ರಿಜಕನವರ, ಎ.ಎಸ್. ಕುಂಬಾರ, ಆರ್.ಡಿ.ಸನಗೊಂಡ, ಹಲವಾರು ವಕೀಲ, ವಿದ್ಯಾರ್ಥಿಗಳು, ಅಂಗನವಾಡಿ, ಆಶಾ, ಕಾರ್ಯಕರ್ತೆಯರು ಪಾಲ್ಗೊಂಡಿದರು.