ರಾಜ್ಯದ ಕೋರ್ ಕಮಿಟಿಯ ಕಿತ್ತೂರು ಕರ್ನಾಟಕದ ಸಭೆ
ರಾಣೇಬೆನ್ನೂರು 13: ಹಾವೇರಿ ಜಿಲ್ಲಾ ಲೋಕಸಭಾ ಚುನಾವಣೆಯನ್ನು ಜೆಡಿಎಸ್ ವರಿಷ್ಠ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆದೇಶದಂತೆ ಕೆಲಸ ಮಾಡುವುದಾಗಿ ರಾಣೇಬೆನ್ನೂರು ಜೆಡಿಎಸ್ ಮುಖಂಡ ಮಂಜುನಾಥ್ ಗೌಡಶಿವಣ್ಣನವರ ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಜಾತ್ಯತೀತ ಜನತಾದಳದ ಪಕ್ಷದ ಪುನರ್ಚೇತನ ಪೂರ್ವ ಸಭೆ ಹಾಗೂ ರಾಜ್ಯದ ಕೋರ್ ಕಮಿಟಿಯ ಕಿತ್ತೂರು ಕರ್ನಾಟಕದ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಬಿಜೆಪಿ ಜೆಡಿಎಸ್ ಮೈತ್ರಿಗೆ ಹಲವು ನಾಯಕರು ಒಪ್ಪಿಕೊಂಡಿದ್ದರು, ರಾಜ್ಯದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರ ಅವರು ನಮಗೆ ಯಾವ ರೀತಿ ಮಾರ್ಗದರ್ಶನ ನೀಡುತ್ತಾರೆ. ಅದೇ ರೀತಿ ನಾವು ನಮ್ಮ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಬಿಜೆಪಿ ಜೆಡಿಎಸ್ ಒಗ್ಗಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರು ಅವರ ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ. 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಮಾಡುತ್ತದೆ. ಚುನಾವಣೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಹಾಗೂ ಬಿಜೆಪಿಯ ಕಾರ್ಯಕರ್ತರು ಸೇರಿ ಈ ಬಾರಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಯಾವುದೇ ಭಿನ್ನ ಅಭಿಪ್ರಾಯ ಇದ್ದರೂ ಕೂಡ ಅದನ್ನು ಬದಿಗೆ ಒತ್ತಿ ಜೆಡಿಎಸ್ ಹೈಕಮಾಂಡ್ ಆದೇಶದಂತೆ ಜಿಲ್ಲೆಯಲ್ಲಿ ಚುನಾವಣೆಯ ತಂತ್ರವನ್ನು ರೂಪಿಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಜಿ ಟಿ ದೇವೇಗೌಡ, ವೈಎಸ್ ದತ್ತಾ, ಬಂಡೆಪ್ಪ ಕಾಶಂಪುರ, ಮಹೇಶ್ ಹೊನ್ನೆಜ್ಜೆರ, ಮನು ಗೌಡಶಿವಣ್ಣನವರ, ಜಯರಾಮ್ ಅಂಗಡಿ, ಇರ್ಫಾನ್ ಹಾಗೂ ಜೆಡಿಎಸ್ ಮುಖಂಡರು, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.