ಕಾಗವಾಡ

ಶಿವಾನಂದ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ ಸಂಭ್ರಮಾಚರಣೆ

ಶಿವಾನಂದ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ ಸಂಭ್ರಮಾಚರಣೆ

ಕಾಗವಾಡ 21:  ವೀರತೆ, ಧೈರ್ಯ, ಶೌರ್ಯ ಹಾಗೂ ಹೋರಾಟವನ್ನು ಮೈಗೊಡಿಸಿಕೊಂಡು ಕಿತ್ತೂರು ರಾಣಿ ಚನ್ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ವೀರವಣಿತೆಯಾಗಿ ರಾಜ್ಯಭಾರ ಮಾಡಿದಂತಹ ಕೆಚ್ಚೆದೆಯ ಮಹಿಳೆಯಾಗಿದ್ದಾರೆಂದು ಇತಿಹಾಸ ವಿಭಾಗದ ಉಪನ್ಯಾಸಕ ಪ್ರೊ. ಎನ್‌.ಎಂ. ಬಾಗೇವಾಡಿ ಅಭಿಪ್ರಾಯ ಪಟ್ಟಿದ್ದಾರೆ. 

ಅವರು ಸೋಮವಾರ ದಿ. 21 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕಿತ್ತೂರು ಉತ್ಸವದ 200ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಐಕ್ಯೂಎಸಿ ಪ್ರಾಯೋಜಿತ ಕಾಲೇಜು ಒಕ್ಕೂಟ ಹಾಗೂ ಕನ್ನಡ, ಇತಿಹಾಸ ವಿಭಾಗಗಳು ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಮ ಮಾತನಾಡುತ್ತಿದ್ದರು. 

ಕಿತ್ತೂರು ಸಂಸ್ಥಾನವು 200 ವರ್ಷಗಳ ಹಿಂದೆಯೆ ಬ್ರಿಟಿಷರಿಗೆ ಸ್ವಾಭಿಮಾನಿ ಹೋರಾಟದ ಬಿಸಿಯನ್ನು ಮುಟ್ಟಿಸಿತ್ತು. ರಾಣಿ ಚನ್ನಮ್ಮಾ ಹಾಗೂ ದೊರೆ ಮಲ್ಲಸರ್ಜ ಕಿತ್ತೂರಿನ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸಿದ್ದನ್ನು ಸ್ಮರಿಸಬಹುದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್‌.ಎ. ಕರ್ಕಿ ವಹಿಸಿ, ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ಎಂ. ಜಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಿತ್ತೂರು ಸಂಸ್ಥಾನವು ಕನ್ನಡ ನಾಡಿನ ಅಸ್ಮಿತೆಯಾಗಿದ್ದು, ಕರ್ನಾಟಕ ಸರ್ಕಾರವು ಕಿತ್ತೂರು ಉತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸುತ್ತಿದ್ದಿದ್ದು ಶ್ಲಾಘನೀಯವಾಗಿದೆ ಎಂದರು. 

ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಡಾ. ಆರ್‌.ಎಸ್‌. ಕಲ್ಲೋಳಿಕರ ಸ್ವಾಗತಿಸಿದರು. ಎಸ್‌.ಎಂ. ಪರಗೌಡ ಮತ್ತು ಜೆ.ಎನ್‌. ನಾಯಕ ನಿರೂಪಿಸಿದರು. ಡಾ. ಎಸ್‌.ಪಿ. ತಳವಾರ ವಂದಿಸಿದರು. 


ಸುದ್ದಿ ಓದಿ